ಕರ್ನಾಟಕ

10 ಅಡಿ ಎತ್ತರ ಬೆಳೆದ ಟೊಮೇಟೋ..! ಇನ್ಪೋಸಿಸ್‌ ಸುಧಾಮೂರ್ತಿಯಿಂದ ವೀಕ್ಷಣೆ..!

Pinterest LinkedIn Tumblr


ಚಂದಾಪುರ (ಬೆಂಗಳೂರು ಗ್ರಾಮಾಂತರ): ಚಂದಾಪುರ ಸಮೀಪದ ಬಿದರಗುಪ್ಪೆ ಗ್ರಾಮದ ದೊಡ್ಡಮನೆ ಆರ್‌.ನರೇಂದ್ರಬಾಬು ಎಂಬುವರ ತೋಟದಲ್ಲಿ ಬರೋಬ್ಬರಿ ಹತ್ತು ಅಡಿ ಎತ್ತರದ ಟೊಮೇಟೋ ಗಿಡ ಬೆಳೆಯಲಾಗಿದೆ. ಈ ಬೆಳೆಯನ್ನು ವೀಕ್ಷಣೆ ಮಾಡಲು ಇನ್ಪೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಭೇಟಿ ನೀಡಿದ್ದರು.

ಆರ್‌.ನರೇಂದ್ರಬಾಬು ಅವರು ಸುಮಾರು 6 ಎಕರೆ ಪ್ರದೇಶದ ತಮ್ಮ ತೋಟದಲ್ಲಿ ಟೊಮೇಟೊ ಬೆಳೆ ಬೆಳೆದಿದ್ದಾರೆ. ಗಿಡಗಳು ಸುಮಾರು 10 ಅಡಿ ಎತ್ತರಕ್ಕೆ ಬೆಳೆದಿವೆ. ಸಾಮಾಜಿಕ ಜಾಲತಾಣಗಳಲ್ಲಿ10 ಅಡಿ ಎತ್ತರದ ಟೊಮೇಟೊ ಬೆಳೆ ಬಗ್ಗೆ ಸುದ್ದಿ ಹರಡಿತ್ತು. ಹೀಗಾಗಿ, ಬೆಳೆಯನ್ನು ನೋಡುವ ಕುತೂಹಲದಿಂದ ಸುಧಾಮೂರ್ತಿಯವರು ಬಿದರುಗುಪ್ಪೆಯ ನರೇಂದ್ರ ಬಾಬು ತೋಟಕ್ಕೆ ಭೇಟಿ ನೀಡಿದ್ದರು. ತೋಟದಲ್ಲಿರುವ ಬೆಳೆಯನ್ನು ವೀಕ್ಷಿಸಿದ ಸುಧಾಮೂರ್ತಿ, ಮನೆಯವರೊಂದಿಗೆ ಚರ್ಚಿಸಿ ವಿವರ ಪಡೆದು ಮೆಚ್ಚುಗೆ ಸೂಚಿಸಿದರು.

ನಂತರ ಮಾತನಾಡಿದ ಸುಧಾ ಮೂರ್ತಿ, ದೇಶದ ಬೆನ್ನಲುಬಾಗಿರುವ ರೈತ ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಜೊತೆಗೆ ಮಧ್ಯವರ್ತಿಗಳ ಕಾಟದಿಂದ ರೈತರು ಸಂಕಷ್ಠವನ್ನು ಎದುರಿಸುತ್ತಿದ್ದರೆ. ಆದ್ದರಿಂದ ಸರ್ಕಾರಗಳು ರೈತರಿಗೆ ಹೆಚ್ಚಿನ ಪೋತ್ಸಾಹ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ರೈತರು ನೂತನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಯವುದರಿಂದ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯ ಎಂದ ಸುಧಾ ಮೂರ್ತಿ, ಕೃಷಿಯ ಜೊತೆಗೆ ಹಸು, ಕುರಿ, ಕೋಳಿ ಸಾಕಾಣಿಕೆ ಮಾಡುವುದರಿಂದ ರೈತರು ಆರ್ಥಿಕವಾಗಿ ಸಬಲರಾಗಬಹುದು ಎಂದರು.

ನರೇಂದ್ರಬಾಬು ಅವರು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಟೊಮೇಟೊ ಬೆಳೆದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದನ್ನು ನೋಡಿ ಮೆಚ್ಚುಗೆ ತಿಳಿಸಬೇಕು ಎಂಬ ಉದ್ದೇಶದಿಂದ ಖುದ್ದಾಗಿ ನಾನೇ ಬಂದಿದ್ದೇನೆ ಎಂದು ತಿಳಿಸಿದರು.

Comments are closed.