ಮಂಗಳೂರು ಡಿಸೆಂಬರ್. 24 : ಮಂಗಳೂರು ಧರ್ಮಪ್ರಾತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಸಂದೇಶವನ್ನು ನಾಡಿನ ಜನತೆಗೆ ನೀಡಿದ್ದಾರೆ.
ಮನುಷ್ಯ ಜೀವವು ದೇವರು ಕೊಟ್ಟ ಅಮೂಲ್ಯ ಕೊಡುಗೆ. ಅದನ್ನು ರಕ್ಷಿಸೋಣ, ಬೆಳೆಸೋಣ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ನಿರ್ದಾರ ಮಾಡೋಣ. ಮಾನವ ದೇಹವೇ ದೇವರಿರುವ ದೇವಾಲಯ. ಅಲ್ಲಿ ದೇವರನ್ನು ಸ್ತುತಿಸೋಣ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಘಟನೆ ನನಗೆ ತುಂಬಾ ದುಃಖ ತರುವಂತದ್ದು, ಇಂತಹ ಘಟನೆ ಮರುಕಳಿಸದಂತೆ ನಾವು ನೋಡಬೇಕಾಗಿದೆ. ಘಟನೆಯಲ್ಲಿ ಕುಟುಂಬದ ಸದಸ್ಯರನ್ನು ಕಳಕೊಂಡವರಿಗೆ ಹಾಗೂ ಗಾಯಗೊಂಡವರಿಗೆ ಸಾಂತ್ವನವನ್ನು ಕೋರುತ್ತೇವೆ. ಗಾಯಗೊಂಡವರು ಬೇಗನೆ ಗುಣಮುಖರಾಗಲು ದೇವರಲ್ಲಿ ಪ್ರಾರ್ಥಿಸುತ್ತೇನೆ.ಮಂಗಳೂರಿಗರು ಶಾಂತಿ ಪ್ರಿಯರು, ಪರಸ್ಪರ ಗೌರವಿಸುವವರು. ಈಗ ಜಾತಿ ಮತ ಧರ್ಮಗಳ ಭೇದವಿಲ್ಲದೇ “ನಾವೆಲ್ಲರೂ ಒಂದು” ಎಂದು ಜಗತ್ತಿಗೆ ಸಾರಬೇಕಾಗಿದೆ. ಅದ್ದರಿಂದ ನಾವೆಲ್ಲರೂ ಒಟ್ಟಾಗಿ ಶಾಂತಿ ಕಾಪಾಡಲು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಬಿಷಪ್ ಅವರು ಕರೆನೀಡಿದರು.
2019 ವರುಷದಲ್ಲಿ ನಾವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ವಿಶೇಷವಾಗಿ ಲಾವ್ದಾತೊ ಸಿ – ವೃಕ್ಷಾವಂದನ್ ಕಾರ್ಯಕ್ರಮದ ಮೂಲಕ ಸುಮಾರು 8೦೦೦೦ ಸಸಿಗಳನ್ನು ನೆಟ್ಟಿದ್ದೇವೆ ಹಾಗೂ ಜಲಬಂದನ್ ಕಾರ್ಯಕ್ರಮದ ಮೂಲಕ ನೀರಿನ ಕೊಯ್ಲು ಮಾಡಲು, ಕೆರೆಗಳನ್ನು ಶುಚಿಗೊಳಿಸಲು, ಪ್ರಕ್ರತಿಯನ್ನು ರಕ್ಷಿಸಲು ಅನೇಕ ವಿಧದಲ್ಲಿ ಪ್ರಯತ್ನಿಸಿದೆವು. ಭಂದುತ್ವ ನಮಗೆ ವಿವಿಧ ಧರ್ಮದ ಅನುಯಾಯಿಗಳ ನಡುವಿನ ಸಂಬಂಧವನ್ನು ವೃದ್ದಿಸಲು ಸಹಾಯ ಮಾಡಿತು.
ಅದರೊಡನೆ ೨೦೧೯ ವರುಷವನ್ನು ಯುವ ಜನರಿಗಾಗಿ ಅರ್ಪಿಸಿ ಯುವಜನರಿಗೆ ಪ್ರೇರಣೆ ನೀಡಿ, ಅವರ ಶಕ್ತಿ ಮತ್ತು ಉದಾರ ಮನಸ್ಸು ಉಪಯೋಗಿಸುವ ಮೂಲಕ ನೆರೆಪೀಡಿತರಿಗೆ ಸಹಾಯ ಮಾಡಿದೆವು. ಯುವಜನರಿಗಾಗಿಯೇ ಅನೇಕ ಕಾರ್ಯಕ್ರಮಗಳನ್ನು ಅಯೋಜಿಸಿ ಅವರ ವ್ಯಕ್ತಿತ್ವದ ವಿಕಸನವು ಪ್ರಭು ಯೇಸುವಿನ ಸುವಾರ್ತೆಯ ಪ್ರಕಾರ ಸಾಕಾರ ಗೊಳಿಸಲು ಪ್ರಯತ್ನಿಸಿದೆವು. ೨೦೨೦, ಫೆಬ್ರವರಿ ೨ ರಂದು, ಮಂಗಳೂರು, ಬೆಳ್ತಂಗಡಿ ಮತ್ತು ಪುತ್ತೂರು ಧರ್ಮಪ್ರಾಂತ್ಯಗಳ ಯುವಜನರಿಗಾಗಿ ಒಂದು ಕಾರ್ಯಕ್ರಮವನ್ನು ಮಡಂತ್ಯಾರಿನಲ್ಲಿ ಹಮ್ಮಿಕೊಂಡಿದ್ದೇವೆ.
ಮುಂದಿನ ವರುಷ (೨೦೨೦) ಮನುಷ್ಯ ಜೀವಕ್ಕೆ ಗೌರವಕೊಡುವಂತಹ, ರಕ್ಷಿಸುವಂತಹ ಹಾಗೂ ಉನ್ನತಿಯ ಮಟ್ಟಕ್ಕೆ ಏರಿಸಲು ಪೂರಕವಾಗುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವೆವು ಎಂದು ಬಿಷಪ್ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಈ ಸಂದರ್ಭದಲ್ಲಿ ಫಾ. ಮಾಕ್ಸಿಂ ನೊರೊನ್ಹಾ ವಿಕಾರ್ ಜನರಲ್ ಮಂಗಳೂರು ಧರ್ಮಪಾಂತ್ರ್ಯ, ಫಾ. ವಿಕ್ಟರ್ ಜಾರ್ಜ್ ಚಾನ್ಸಲರ್ , ಫಾ.ವಿಜಯ್ ಲೋಬೋ ಪಿಆರ್’ಓ, ಪಿಆರ್’ಓ ಮಾರ್ಸೆಲ್ ಮೊಂತೆರೋ ಕೆನರಾ ಕಮ್ಯೂನಿಕೇಷನ್ ನಿರ್ದೇಶಕ ಫಾ. ರಿಚಾರ್ಡ್ ಡಿಸೋಜಾ, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.
Comments are closed.