ಕರಾವಳಿ

ಬಂಟ್ಸ್ ಹಾಸ್ಟೆಲ್‌ನಲ್ಲಿ ಧನ್ಯೋತ್ಸವ, ಅಭಿನಂದನಾ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಅಭಿನಂದನೆ ಹಾಗೂ ಧನೋತ್ಸವ ಕಾರ್ಯಕ್ರಮ ಬಂಟ್ಸ್‌ಹಾಸ್ಟೆಲ್‌ನ ಶ್ರೀರಾಮಕೃಷ್ಣ ಕಾಲೇಜ್ ಮೈದಾನದಲ್ಲಿ ಜರಗಿತು.

ಸಭೆಯಲ್ಲಿ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್‌ರೈ ವಹಿಸಿದ್ದರು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮತ್ತು ಡಾ. ಆಶಾ ಜ್ಯೋತಿ ರೈ ದಂಪತಿಯನ್ನು ಶೆಡ್ಡೆ ಮಂಜುನಾಥ ಭಂಡಾರಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಮಂಗಳೂರು ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾದ ೨೦ ಮಂದಿ ಸದಸ್ಯರನ್ನು ಗೌರವಿಸಲಾಯಿತು. ಇದೇ ವೇಳೆ ಬಂಟರ ಮಾತೃ ಸಂಘದ ಚುನಾವಣೆಯಲ್ಲಿ ದುಡಿದವರಿಗೆ ಕೃತಜ್ಞತೆ ಸಲ್ಲಿಸುವ `ಧನ್ಯೋತ್ಸವ’ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಜಯರಾಮ ಸಾಂತ, ವಸಂತ ಶೆಟ್ಟಿ, ರವೀಂದ್ರ ನಾಥ್ ರೈ, ಸುಂದರ ಶೆಟ್ಟಿ, ಕೃಷ್ಣಪ್ರಸಾದ್ ರೈ, ಜಗನ್ನಾಥ ಶೆಟ್ಟಿ ಬಾಳ, ಕೇಶವಮಾರ್ಲ, ಗೋಪಾಲ ಶೆಟ್ಟಿ, ಉಮೇಶ್ ಕೈಪದವು ಮೇಗಿನಮನೆ, ಡಾ. ಸಚ್ಚಿದಾನಂದ ಶೆಟ್ಟಿ, ಆನಂಧ ಶೆಟ್ಟಿ, ಎನ್. ಮುರಳೀಧರ ಶೆಟ್ಟಿ, ಉಲ್ಲಾಸ್ ಆರ್. ಶೆಟ್ಟಿ, ಮನೀಶ್ ರೈ, ಸುಖೇಶ್ ಚೌಟ ಉಳ್ಳಾಲಗುತ್ತು, ಸಬಿತಾ ಆರ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಪ್ರಕಾಶಾಭಿನಂದನೆ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಸುರೇಶ್‌ಶೆಟ್ಟಿ ,ಹೇಮನಾಥ ಶೆಟ್ಟಿ ಕಾವು, ಜಯಲಕ್ಷ್ಮೀ ಶೆಡ್ಡೆ ಉಪಸ್ಥಿತರಿದ್ದು ಶುಭ ಹಾರೈಸಿದರು.ಮಂಜುಳಾ ಶೆಟ್ಟಿ ಮತ್ತು ಪ್ರಕಾಶ್ ಮೇಲಾಂಟ ಕಾರ್ಯಕ್ರಮ ನಿರ್ವಹಿಸಿದರು.

Comments are closed.