ಕರಾವಳಿ

ಯಕ್ಷಾಂಗಣದಲ್ಲಿ ರಂಜಿಸಿದ ಕನ್ನಡದ ನುಡಿಹಬ್ಬ ಸಂಧಾನ ಸಪ್ತಕ: ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ

Pinterest LinkedIn Tumblr

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ, ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಹಾಗೂ ಮಂಗಳೂರು ವಿವಿ ಡಾ.ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಆಯೋಜಿಸಿದ್ದ ಏಳನೇ ವರ್ಷದ ನುಡಿಹಬ್ಬ ‘ ಯಕ್ಷಗಾನ ತಾಳಮದ್ದಳೆ ಸಪ್ತಾಹ- 2019’ ನವೆಂಬರ 17ರಿಂದ 21ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಜರಗಿತು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅವರು ಅಪರೂಪದ ಏಳು ಸಂಧಾನ ಪ್ರಸಂಗಗಳನ್ನು ಆಯ್ದು ‘ಸಂಧಾನ ಸಪ್ತಕ’ ಎಂಬ ವಿನೂತನ ಪರಿಕಲ್ಪನೆಯಲ್ಲಿ ತಾಳಮದ್ದಳೆ ಸಪ್ತಾಹವನ್ನು ಸಂಯೋಜಿಸಿದುದು ಈ ಬಾರಿಯ ವಿಶೇಷ.

ಸಂಧಾನ ಸಪ್ತಕ : ಸಪ್ತಾಹದ ಮೊದಲ ದಿನ ಶ್ರೀದೇವಿ ಮಹಾತ್ಮೆಯ ‘ಸುಗ್ರೀವ ಸಂಧಾನ’ ಪ್ರಕರಣದಲ್ಲಿ ಸತೀಶ್ ಶೆಟ್ಟಿ ಬೊಂದೇಲ್, ಸುಬ್ರಹ್ಮಣ್ಯ ಭಟ್ ಚಿತ್ರಾಪುರ ಮತ್ತು ಜಯರಾಮ ಆಚಾರ್ಯ ಚೇಳಾಯರು ಹಿಮ್ಮೇಳದಲ್ಲಿದ್ದರು. ಅರ್ಥ ಧಾರಿಗಳಾಗಿ ಶಂಭುಶರ್ಮ ವಿಟ್ಲ, ಸರ್ಪಂಗಳ ಈಶ್ವರ ಭಟ್ ,ಗಣರಾಜ ಕುಂಬ್ಳೆ ,ರವಿ ಅಲೆವೂರಾಯ, ಪಶುಪತಿ ಶಾಸ್ತ್ರಿ ಶಿರಂಕಲ್ಲು, ವಾದಿರಾಜ ಕಲ್ಲೂರಾಯ, ಅವಿನಾಶ ಶೆಟ್ಟಿ ಉಬರಡ್ಕ ಭಾಗವಹಿಸಿದ್ದರು.ಸಂಧಾನ ಸಪ್ತಕದಲ್ಲಿ ದ್ವಿತೀಯ ಆಖ್ಯಾನ ಭರತೇಶ ವೈಭವ ಪ್ರಸಂಗದ ‘ದಕ್ಷಿಣಾಂಕ ಸಂಧಾನ’ ಭಾಗ. ಪುತ್ತಿಗೆ ರಘುರಾಮ ಹೊಳ್ಳ, ಪದ್ಮನಾಭ ಉಪಾಧ್ಯಾಯ, ಮುರಾರಿ ಕಡಂಬಳಿತ್ತಾಯ, ಮಧುಸೂದನ ಅಲೆವೂರಾಯ ಅವರ ಹಿಮ್ಮೇಳಕ್ಕೆ ಅರ್ಥವಾದಿಗಳಾದವರು ಕೆ. ಗೋವಿಂದಭಟ್, ಉಬರಡ್ಕ ಉಮೇಶ ಶೆಟ್ಟಿ ,ತಾರಾನಾಥ ವರ್ಕಾಡಿ, ಡಾ.ದಿನಕರ ಎಸ್.ಪಚ್ಚನಾಡಿ ಮತ್ತು ಉಮೇಶ ಆಚಾರ್ಯ ಗೇರುಕಟ್ಟೆ.

ಮೂರನೆಯ ದಿನದ ಕಥಾಭಾಗ ‘ಅಂಗದ ಸಂಧಾನ’. ಪಟ್ಲ ಸತೀಶ್ ಶೆಟ್ಟಿ , ಪಿ.ಟಿ.ಜಯರಾಮ ಭಟ್, ಗುರುಪ್ರಸಾದ್ ಬೊಳಿಂಜಡ್ಕ ಹಿಮ್ಮೇಳದಲ್ಲಿದ್ದರು. ಡಾ.ಎಂ. ಪ್ರಭಾಕರ ಜೋಶಿ , ಸೇರಾಜೆ ಸೀತಾರಾಮಭಟ್ಟ, ರಾಧಾಕೃಷ್ಣ ಕಲ್ಚಾರ್ , ಮಹಾಬಲ ಶೆಟ್ಟಿ ಕೂಡ್ಲು ಹಾಗೂ ಪ್ರೊ.ನಾರಾಯಣ ಹೆಗಡೆ ಪಾತ್ರವಹಿಸಿದ್ದರು.

ನಾಲ್ಕನೆಯ ದಿನ ಪ್ರಸ್ತುತಗೊಂಡ ಪ್ರಸಂಗ ‘ಮಾರುತಿ ಸಂಧಾನ. ಭವ್ಯಶ್ರೀ ಕುಲ್ಕುಂದ, ಪ್ರಶಾಂತ ಶೆಟ್ಟಿ ವಗೆನಾಡು, ಲವಕುಮಾರ್ ಐಲ ಅವರ ಹಿಮ್ಮೇಳಕ್ಕೆ ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೋ ಸಂಪಾಜೆ, ಹರೀಶ ಬೊಳಂತಿಮೊಗರು, ಜಯಪ್ರಕಾಶ ಶೆಟ್ಟಿ ಪೆರ್ಮುದೆ ಅರ್ಥಧಾರಿಗಳಾಗಿದ್ದರು.

ಐದನೇ ದಿನ ‘ಸುಭದ್ರಾ ಸಂಧಾನ’. ಪ್ರಶಾಂತ ರೈ ಪುತ್ತೂರು, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ರೋಹಿತ್ ಉಚ್ಚಿಲ ಅವರ ಹಿಮ್ಮೇಳ. ಉಜಿರೆ ಅಶೋಕ ಭಟ್, ಎಂ.ಕೆ. ರಮೇಶ ಆಚಾರ್ಯ, ವಾಸುದೇವ ರಂಗಾ ಭಟ್, ಕರುಣಾಕರ ಶೆಟ್ಟಿ ಬೆಳ್ತಂಗಡಿ, ಸೀತಾರಾಮ ಕುಮಾರ್ ಕಟೀಲು, ವಿನಯ ಆಚಾರ್ಯ ಹೊಸಬೆಟ್ಟು, ಡಾ. ವಿನಾಯಕ ಭಟ್ ಗಾಳಿಮನೆ, ಜಿ.ಕೆ.ಭಟ್ ಸೇರಾಜೆ ಅರ್ಥಧಾರಿಗಳಾಗಿ ಕಾಣಿಸಿಕೊಂಡರು.

ಸಪ್ತಾಹದ ಆರನೆಯ ದಿನ ‘ಸಿರಿ ಕಿಟ್ಣ ಸಂಧಾನ’ ತುಳು ಕಿಟ್ಣ ರಾಜಿ ಪರ್ಸಂಗ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಧೀರಜ್ ರೈ ಸಂಪಾಜೆ, ರವಿರಾಜ ಜೈನ್ ಕಾರ್ಕಳ,ವಿಶ್ವನಾಥ ಶೆಣೈ ಇದ್ದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಕದ್ರಿ ನವನೀತ ಶೆಟ್ಟಿ, ಸದಾಶಿವ ಆಳ್ವ ತಲಪಾಡಿ, ದಯಾನಂದ ಕತ್ತಲ್ಸಾರ್, ವಿಜಯಶಂಕರ ಆಳ್ವ ಮಿತ್ತಳಿಕೆ ತುಳು ಭಾಷೆಯ ಅರ್ಥಗಾರಿಕೆಯಿಂದ ರಂಜಿಸಿದರು.ಸಪ್ತ ಸಂಧಾನದ ಕೊನೆಯ ಪ್ರಸಂಗ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯೊಳಗಣ ‘ಷಣ್ಮುಖ ಸಂಧಾನ’. ಬಲಿಪ ಪ್ರಸಾದ ಭಟ್, ದಯಾನಂದ ಶೆಟ್ಟಿಗಾರ್ ಮಿಜಾರು ಮತ್ತು ದೇವಾನಂದ ಭಟ್ ಬೆಳುವಾಯಿ ಅವರ ಹಿಮ್ಮೇಳವಿತ್ತು. ವಿಷ್ಣು ಶರ್ಮ ವಾಟೆಪಡ್ಪು,ನಾ. ಕಾರಂತ ಪೆರಾಜೆ, ಗಣೇಶ ಶೆಟ್ಟಿ ಕನ್ನಡಿಕಟ್ಟೆ ,ಪಕಳಕುಂಜ ಶ್ಯಾಮ ಭಟ್, ಎಂ.ಎಂ.ಸಿ.ರೈ, ವಾಸುದೇವ ಆಚಾರ್ಯ ಕುಳಾಯಿ, ಹರಿಶ್ಚಂದ್ರ ನಾಯಗ ಮಾಡೂರು ಅರ್ಥವಾದಿಗಳಾಗಿದ್ದರು.

ಸರಣಿ ಸಂಸ್ಮರಣ:  ತಾಳಮದ್ದಳೆ ಸಪ್ತಾಹ ದೊಂದಿಗೆ ಪ್ರತಿದಿನ ಸಂಯೋಜಿಸಿದ್ದ ‘ಸರಣಿ ಸಂಸ್ಮರಣ’ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾ ಪೋಷಕರಾಗಿದ್ದ ದಿ.ಅಳಪೆ ಶ್ರೀನಿವಾಸ ಭಟ್ಟ ಮತ್ತು ದಿ.ಎ.ಶಾರದಾ; ಕೀರ್ತಿಶೇಷ ಅರ್ಥಧಾರಿಗಳಾಗಿದ್ದ ದಿ.ಕೆ.ಕಾಂತ ರೈ ವಿದ್ವಾನ್, ದಿ.ಎ.ಕೆ.ನಾರಾಯಣ ಶೆಟ್ಟಿ ಮತ್ತು ದಿ.ಎ.ಕೆ.ಮಹಾಬಲ ಶೆಟ್ಟಿ, ಹಿರಿಯ ಯಕ್ಷಗಾನ ಹಾಸ್ಯಗಾರ ದಿ.ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ಹವ್ಯಾಸಿ ಯಕ್ಷಗಾನ ಕಲಾವಿದ ದಿ.ಕಿಟ್ಟಣ್ಣ ಶೆಟ್ಟಿ ನುಳಿಯಾಲು ಹಾಗೂ ಕವಿ,ಕಲಾಪೋಷಕ ದಿ.ಕುದ್ರೆಪ್ಪಾಡಿ ಜಗನ್ನಾಥ ಆಳ್ವ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಪ್ರಶಸ್ತಿ – ಸಮ್ಮಾನ : ಹೆಸರೇ ಹೇಳುವಂತೆ ಇದು ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವೆಂಬ ನೆಲೆಯಲ್ಲಿ ನವಂಬರ್ ತಿಂಗಳಿನಲ್ಲಿ ನಡೆದ ಕನ್ನಡದ ನುಡಿ ಹಬ್ಬ .ಈ ಸಂದರ್ಭದಲ್ಲಿ ಸಾಧಕರಿಗೆ ಪ್ರಶಸ್ತಿ – ಸಮ್ಮಾನಗಳನ್ನೂ ಏರ್ಪಡಿಸಲಾಗಿತ್ತು. ಆಳ್ವಾಸ್ ನುಡಿಸಿರಿಯ ಪ್ರವರ್ತಕ ಡಾ.ಎಂ.ಮೋಹನ ಆಳ್ವ ಸಪ್ತಾಹವನ್ನು ಉದ್ಘಾಟಿಸಿರುವುದು ಔಚಿತ್ಯಪೂರ್ಣವಾಗಿತ್ತು.

ಆರಂಭದ ದಿನ ಜರಗಿದ ‘ಕೃಷ್ಣಾಭಿವಂದನಂ’ ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಯಕ್ಷಗಾನ ಕಲಾಪೋಷಕ ಕೃಷ್ಣ ಜೆ.ಪಾಲೆಮಾರ್ ಅವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡಲಾಯಿತು. ಸಮಾರೋಪ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಸ್ತ್ರೀವೇಷಧಾರಿ 87 ರ ಹರೆಯದ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಯನ್ನು ನೀಡಲಾಯಿತು.

Comments are closed.