ಕರಾವಳಿ

ಪ್ರಕಾಶಾಭಿನಂದನ- 60ರ ಸಂಭ್ರಮಕ್ಕೆ ವ್ಯಾಪಕ ಸಿದ್ದತೆ : ನಾಳೆ ಸಂಜೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.24 : ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೊರಂಗ್ರಪಾಡಿ .ಪ್ರಕಾಶ್ ಶೆಟ್ಟಿಯವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಂದ ಡಿ.25ರಂದು ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಂಡ ಪ್ರಕಾಶಾಭಿನಂದನ- 60ರ ಸಂಭ್ರಮಕ್ಕೆ ವ್ಯಾಪಕ ಸಿದ್ದತೆ ಮಾಡಲಾಗಿದ್ದು, ನಾಳೆ ಸಂಜೆ ಕಾರ್ಯಕ್ರಮವನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿರುವರು ಎಂದು ಪ್ರಕಾಶಾಭಿನಂದನ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯ ಮಂತ್ರಿ ಡಾ.ಸಿ.ಎನ್. ಅಶ್ವಥನಾರಾಯಣ , ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕನ್ನಡ ಸಂಸ್ಕೃತಿ ಪ್ರವಾಸೋದ್ಯಮ ಖಾತೆಯ ಸಚಿವ ಸಿ.ಟಿ.ರವಿ, ಮೀನುಗಾರಿಕೆ ಮತ್ತು ಬಂದರು ಹಾಗೂ ಮುಜರಾಯಿ ಖಾತೆಯ ಸಚಿವ ಕೊಟ ಶ್ರೀನಿವಾಸ ಪೂಜಾರಿ, ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರು ಸಂಸದರು, ದೇಶ, ವಿದೇಶದ ಉದ್ಯಮಿಗಳು ರಾಜ್ಯ,ರಾಷ್ಟ್ರ ಮಟ್ಟದ ರಾಜಕೀಯ ನಾಯಕರು, ಸ್ಯಾಂಡಲ್ ವುಡ್ ,ಬಾಲಿವುಡ್ ನಟ-ನಟಿಯರು. ಬಂಟ ಸಮಾಜದ ಗಣ್ಯರು, ಎಲ್ಲಾ ಸಮಾಜದ ಮುಖಂಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಕೃತಿ ವಿಕೋಪ ಪರಿಹಾರಕ್ಕೆ ರಾಜ್ಯಕ್ಕೆ ರೂ.1 ಕೋಟಿ ಹಾಗೂ ಬೆಳ್ತಂಗಡಿ ಪರಿಹಾರ ನಿದಿಗೆ ರೂ 26 ಲಕ್ಷ ದೇಣಿಗೆ :

ಈ ಕಾರ್ಯಕ್ರಮದ ಪೂರ್ವ ಭಾವಿಯಾಗಿ 100ಕ್ಕೂ ಮಿಕ್ಕಿ ಅಶಕ್ತರಿಗೆ ಮತ್ತು 66 ವಿದ್ಯಾರ್ಥಿಗಳಿಗೆ ಸುಮಾರು ಒಂದು ಕೋಟಿ ರೂಗಳಿಗೆ ಅಧಿಕ ಮೊತ್ತದ ಸಹಾಯ ಧನವನ್ನು ಡಿ.19ರಂದು ಬಂಗ್ರ ಕೂಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಗಿದೆ. 18 ಜನ ವಿವಿಧ ಕ್ಷೇತ್ರದ ಸಾಧಕರಿಗೆ ಡಿ. 25ರಂದು ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುರೇಶ್ ಶೆಟ್ಟಿ ತಿಳಿಸಿದರು.

ಈಗಾಗಲೇ ಪ್ರಕೃತಿ ವಿಕೋಪ ಪರಿಹಾರ ನಿದಿಗೆ ಸರಕಾರಕ್ಕೆ ರೂ.1 ಕೋಟಿ ದೇಣಿಗೆಯನ್ನು ಪ್ರಕಾಶ್ ಶೆಟ್ಟಿಯವರು ನೀಡಿರುತ್ತಾರೆ. ಮಾತ್ರವಲ್ಲದೇ ಅವರಿಗೆ ರಾಜ್ಯ ಪ್ರಶಸ್ತಿ ನೀಡುವ ಸಂದರ್ಭ ರಾಜ್ಯ ಸರಕಾರ ನೀಡಿದ ರೂ. ಒಂದು ಲಕ್ಷಕ್ಕೆ ತಮ್ಮ ವೈಯಕ್ತಿಕ ನೆಲೆಯಿಂದ ರೂ. 25 ಲಕ್ಷವನ್ನು ಸೇರಿಸಿ ಒಟ್ಟು 26 ಲಕ್ಷ ರೂಪಾಯಿಯನ್ನು ಬೆಳ್ತಂಗಡಿಯ  ನೆರೆ ಪರಿಹಾರಕ್ಕೆ ದೇಣಿಗೆಯಾಗಿ ನೀಡಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಗುರ್ಮೆ ಸುರೇಶ್ ಶೆಟ್ಟಿ ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಭಿನಂದನಾ ಸಮಿತಿಯ ಪದಾಧಿಕಾರಿಗಳಾದ ಸಂತೋಷ್ ವಿ.ಶೆಟ್ಟಿ, ಸುರೇಶ್ ಶೆಟ್ಟಿ ಪಡುಬಿದ್ರೆ, ಎಂ.ಸುರೇಶ್ಚಂದ್ರ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ದೇವಿ ಚರಣ್ ಶೆಟ್ಟಿ ,ಮನೋಹರ ಶೆಟ್ಟಿ, ಪುರುಷೋತ್ತಮ ಶೆಟ್ಟಿ,ಜಿ.ಸುಧೀರ್ ಹೆಗ್ಡೆ, ಅರವಿಂದ ಪೂಂಜ ,ನಿಟ್ಟೆ ರವಿರಾಜ ಶೆಟ್ಟಿ,ನಿತೇಶ್ ಶೆಟ್ಟಿ ಎಕ್ಕಾರು ಮುಂತಾದವರು ಉಪಸ್ಥಿತರಿದ್ದರು.

Comments are closed.