ರಾಷ್ಟ್ರೀಯ

ಉತ್ತರಪ್ರದೇಶ-ಸಿಎಎ ವಿರೋಧಿ ಪ್ರತಿಭಟನೆ; 373 ಪ್ರತಿಭಟನಾಕಾರರ ಆಸ್ತಿ ಜಪ್ತಿ

Pinterest LinkedIn Tumblr


ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾಚಾರ ನಡೆಸಿ, ಸಾರ್ವಜನಿಕ ಆಸ್ತಿ ಹಾನಿಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರ 373 ಮಂದಿ ಪ್ರತಿಭಟನಾಕಾರರ ಆಸ್ತಿಯನ್ನು ವಶಪಡಿಸಿಕೊಂಡಿದೆ. ಈಗಾಗಲೇ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಶಾಮೀಲಾಗಿ ಆಸ್ತಿ ಹಾನಿಗೊಳಿಸಿದ ಪ್ರತಿಭಟನಾಕಾರರಿಗೆ 50 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಹಲವರಿಗೆ ನೋಟಿಸ್ ಜಾರಿ ಮಾಡಿತ್ತು.

ಮೊರಾದಾಬಾದ್ ನ 200 ಮಂದಿ, ಲಕ್ನೋದಲ್ಲಿ 110, ಗೋರಖ್ ಪುರದ 34 ಮಂದಿ, ಫಿರೋಜಾಬಾದ್ ನ 29 ಮಂದಿ ಪ್ರತಿಭಟನಾಕಾರರಿಗೆ ನೋಟಿಸ್ ಜಾರಿಗೊಳಿಸಿತ್ತು. ಡಿಸೆಂಬರ್ 10ರಿಂದ 24ರ ನಡುವೆ ಸಿಎಎ ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿ ಹಾನಿಗೊಳಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ 213 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಲಕ್ನೋ ಡಿಜಿಪಿ ಕೇಂದ್ರ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶ ತಿಳಿಸಿದೆ. ಉತ್ತರಪ್ರದೇಶದಲ್ಲಿ ನಡೆದ ಹಿಂಸಾಚಾರದ ಪ್ರತಿಭಟನೆಯಲ್ಲಿ ಈವರೆಗೆ 19 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 288 ಪೊಲೀಸರು ಗಾಯಗೊಂಡಿದ್ದರು ಎಂದು ವರದಿ ವಿವರಿಸಿದೆ.

Comments are closed.