ವಾಷಿಂಗ್ಟನ್: ವಿಶ್ವದ ಅತೀ ಹಿರಿಯ ಜೋಡಿ ತಮ್ಮ 80ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.
ಟೆಕ್ಸಾಸಿನ ಆಸ್ಟಿನ್‍ನಲ್ಲಿ ನೆಲೆಸಿರುವ ಜಾನ್ ಮತ್ತು ಷಾರ್ಲೆಟ್ ಹೆಂಡರ್ಸನ್ ದಂಪತಿ ಎರಡನೇ ಮಹಾಯುದ್ಧದ ನಂತರ ಡಿಸೆಂಬರ್ 22, 1939ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ದಂಪತಿ 80ನೇ ವಿವಾಹ ವಾರ್ಷಿಕೋತ್ಸವಕ್ಕೆ ಕಾಲಿಟ್ಟಿದ್ದು, ಡಿಸೆಂಬರ್ 11ರಂದು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಜಾನ್ ಅವರು 1912ರಲ್ಲಿ ಫೋರ್ಟ್ ವೋರ್ಥಿನಲ್ಲಿ ಜನಿಸಿದ್ದಾರೆ. ಷಾರ್ಲೆಟ್ ಅವರು 1914ರಲ್ಲಿ ಲೋವಾದಲ್ಲಿ ಜನಿಸಿದ್ದಾರೆ. ಈ ಜೋಡಿ 1934ರಂದು ಟೆಕ್ಸಾಸಿನ ವಿಶ್ವವಿದ್ಯಾಲಯದಲ್ಲಿ ಪರಸ್ಪರ ಭೇಟಿಯಾಗಿ, ಪ್ರೀತಿಸಿ ವಿವಾಹವಾಗಿದ್ದಾರೆ.
ಜಾನ್ ಅವರು ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ, ಐದು ವರ್ಷಗಳ ಕಾಲ ಸ್ನೇಹಿತರಾಗಿದ್ದ ನಾವು ನಂತರ ವಿವಾಹವಾದೆವು. ಮದುವೆಯಾಗುವುದಕ್ಕೂ ಮೊದಲು ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಬಯಸಿದ್ದೆವು. ಹೀಗಾಗಿ ಷಾರ್ಲೆಟ್ ಅವರು ಹ್ಯೂಸ್ಟನ್‍ನಲ್ಲಿ ಶಿಕ್ಷಕಿಯಾದರು. ನಾನು ಟೆಕ್ಸ್‍ನ ಪೋರ್ಟ್ ಆರ್ಥರಿನಲ್ಲಿ ಫುಟ್‍ಬಾಲ್ ಹಾಗೂ ಬಾಸ್ಕೆಟ್ ಬಾಲ್ ಕೋಚ್ ಆಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆನು ಎಂದು ತಿಳಿಸಿದ್ದಾರೆ.
ಈ ದಂಪತಿ ಡಿಸೆಂಬರ್ 22, 1939ರಲ್ಲಿ ಕೇವಲ ಇಬ್ಬರ ಉಪಸ್ಥಿತಿಯಲ್ಲಿ ಮದುವೆಯಾಗಿದ್ದಾರೆ. ಹನಿಮೂನಿಗಾಗಿ ಸ್ಯಾನ್ ಆಂಟೋನಿಯೊ ಎಂಬ ಪುಟ್ಟ ಹೋಟೆಲ್‍ನಲ್ಲಿ ಕೇವಲ 7 ಡಾಲರ್(500 ರೂ.) ನೀಡಿ ರಾತ್ರಿ ಕಳೆದಿದ್ದಾರೆ.
ಜಾನ್ ಅವರಿಗೆ 106 ವರ್ಷ ಹಾಗೂ ಷಾರ್ಲೆಟ್ ಅವರಿಗೆ 105 ವರ್ಷ ವಯಸ್ಸಾಗಿದೆ. ಈ ಇಬ್ಬರೂ ಮದುವೆಯಾಗಿ 80 ವರ್ಷಗಳಾಗಿದ್ದು, ಈ ಮೂಲಕ ಜಗತ್ತಿನ ಅತೀ ಹಿರಿಯ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಕಳೆದ ತಿಂಗಳು ಗಿನ್ನಿಸ್ ದಾಖಲೆಗೆ ಭಾಜನರಾಗಿದ್ದಾರೆ. ಇವರ ವಯಸ್ಸನ್ನು ಟೆಕ್ಸಾಸ್‍ನ ಆಸ್ಟಿನ್‍ನಲ್ಲಿ ಪರಿಶೀಲಿಸಲಾಗಿದೆ. ತಮ್ಮ ದೊಡ್ಡಪ್ಪ ಹಾಗೂ ದೊಡ್ಡಮ್ಮ ನವೆಂಬರಿನಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಲು ಜಾಸನ್ ಅವರು ಗುರುತಿಸಿದ್ದಾರೆ.
ಆರೋಗ್ಯಕರ ಆಹಾರ ಪದಾರ್ಥ ಸೇವಿಸುವುದು ಹಾಗೂ ಮದ್ಯ ಸೇವಿಸದಿರುವುದರಿಂದ ನಾವು ಇಷ್ಟು ವರ್ಷ ಬದುಕಿದ್ದೇವೆ ಎಂದು ದಂಪತಿ ಹೇಳಿಕೊಂಡಿದ್ದಾರೆ. ಜಾನ್ ಫಿಟ್ ಆಗಿರಲು ಸಮುದಾಯ ಜಿಮ್‍ನಲ್ಲಿ ಪ್ರತಿ ನಿತ್ಯ ವ್ಯಾಯಾಮ ಮಾಡುತ್ತಾರೆ. ಹೀಗಾಗಿ ಸ್ವಲ್ಪ ಕೂದಲುದುರುವಿಕೆಯನ್ನು ಬಿಟ್ಟರೆ ಇಬ್ಬರೂ ಆರೋಗ್ಯದಿಂದ ಇದ್ದಾರೆ.
ಗಿನ್ನಿಸ್ ದಾಖಲೆಯ ಪ್ರಕಾರ, ಈ ಹಿಂದೆ ಜೆಲ್ಮಿರಾ ಹಾಗೂ ಹರ್ಬರ್ಟ್ ಫಿಶರ್ ಹಿರಿಯ ದಂಪತಿಯಾಗಿದ್ದರು. ಇವರು 19 ಹಾಗೂ 17ನೇ ವಯಸ್ಸಿನಲ್ಲಿ ಮದುವೆಯಾಗಿದ್ದರು. 2011ರಲ್ಲಿ ಹಾರ್ಬರ್ಟ್ ಸಾವನ್ನಪ್ಪುವುದಕ್ಕೂ 290 ದಿನಗಳ ಹಿಂದೆ ಜೋಡಿಗೆ 86 ವರ್ಷ ವಯಸ್ಸಾಗಿತ್ತು.
Comments are closed.