ಉಡುಪಿ: ಉಡುಪಿ ಕುಂಜಿಬೆಟ್ಟು ಬುಡ್ನಾರು 2 ನೇ ಕ್ರಾಸ್ ನಿವಾಸಿ ದೀಕ್ಷಿತ್ (27) ಎಂಬುವವರು ಡಿ. 14 ರಂದು ಮಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಹೋದವರು ಈವರೆಗೂ ಮನೆಗೆ ವಾಪಾಸ್ ಬಾರದೇ ಕಾಣೆಯಾಗಿದ್ದಾರೆ.
5.2 ಸೆಂ.ಮೀ ಎತ್ತರವಿದ್ದು, ಕಪ್ಪು ಮೈಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Comments are closed.