ಕರಾವಳಿ

ಸೌದಿಯಲ್ಲಿ ಬಂಧಿಯಾದ ಹರೀಶ್ ಬಂಗೇರ ನಿವಾಸಕ್ಕೆ ಶಾಸಕ ಹಾಲಾಡಿ ಭೇಟಿ

Pinterest LinkedIn Tumblr

ಉಡುಪಿ: ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಬರಹ ಬರೆದ ಆರೋಪದಡಿ ಸೌದಿ ಅರೇಬಿಯಾ ಪೊಲೀಸರಿಂದ ಬಂಧನಕ್ಕೊಳಗಾದ ಕುಂದಾಪುರ ತಾಲೂಕಿನ ಬೀಜಾಡಿ ಗೋಯಾಡಿಬೆಟ್ಟಿನ ನಿವಾಸಿ ಹರೀಶ್ ಬಂಗೇರ ನಿವಾಸಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಗುರುವಾರ ಭೇಟಿ ನೀಡಿದರು.

ಈ ಸಂದರ್ಭ ಹರೀಶ್ ಪತ್ನಿ, ತಾಯಿ ಹಾಗೂ ಕುಟುಂಬಿಕರಿಗೆ ಧೈರ್ಯ ತುಂಬಿದ್ದು ಈ ವಿಚಾರದ ಬಗ್ಗೆ ಈಗಾಗಾಲೇ ಮಾಹಿತಿ ಪಡೆದಿರುವೆ. ಹರೀಶ್ ಬಿಡುಗಡೆ ಬಗ್ಗೆ ಸೂಕ್ತ ಕ್ರಮಕ್ಕೆ ಕೂಡಲೇ ಮುಖ್ಯಮಂತ್ರಿಗಳು ಮತ್ತು ಸಂಸದರ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಜಿ.ಪಂ‌ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಬೀಜಾಡಿ ಗ್ರಾ.ಪಂ‌ ಸದಸ್ಯ ಪ್ರಕಾಶ್ ಬೀಜಾಡಿ, ಗೋಪಾಡಿ ಗ್ರಾ.ಪಂ ಸದಸ್ಯ ಸುರೇಶ್ ಶೆಟ್ಟಿ, ಲೋಕೇಶ್ ಅಂಕದಕಟ್ಟೆ ಮೊದಲಾದವರು ಇದ್ದರು

Comments are closed.