ಇಸ್ಲಾಮಾಬಾದ್ : ಪಾಕಿಸ್ತಾನದ ಬೌಲರ್ ಡ್ಯಾನಿಶ್ ಕನೇರಿಯಾ ಹಿಂದೂವಾಗಿರುವ ಕಾರಣ ಅವರನ್ನು ಇತರ ಆಟಗಾರರು ಕೀಳಾಗಿ ಕಾಣುತ್ತಾರೆ. ಅವರೊಂದಿಗೆ ಊಟ ಕೂಡಾ ಮಾಡಲ್ಲ ಎಂದು ಮಾಜಿ ವೇಗಿ ಶೋಯಬ್ ಅಖ್ತರ್ ಆರೋಪಿಸಿದ್ದಾರೆ.
ಅನಿಲ್ ದಳಪತ್ ನಂತರ ಡ್ಯಾನೀಶ್ ಕಾನೇರಿಯಾ ಪಾಕಿಸ್ತಾನ ತಂಡದಲ್ಲಿರುವ ಎರಡನೇ ಹಿಂದೂ ಕ್ರಿಕೆಟ್ ಆಟಗಾರರಾಗಿದ್ದಾರೆ. ಡ್ಯಾನಿಶ್ ಕನೇರಿಯಾ 34. 79 ಸರಾಸರಿಯಲ್ಲಿ 61 ಟೆಸ್ಟ್ ಪಂದ್ಯಗಳಲ್ಲಿ 261 ವಿಕೆಟ್ ಪಡೆದಿದ್ದಾರೆ. ಅವರು 18 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಡ್ಯಾನೀಶ್ ಕಾನೇರಿಯಾ ಹಿಂದೂವಾಗಿರುವ ಕಾರಣ ಅವರ ಕಾರ್ಯಕ್ಷಮತೆಗೆ ಬೆಲೆ ಸಿಗುತ್ತಿಲ್ಲ, ಅವರಿಗೆ ತಾರತಮ್ಯ ಮಾಡಲಾಗುತ್ತದೆ ಎಂದು ಅಖ್ತರ್ ಪಿಟಿವಿ ಸ್ಫೋರ್ಟಿನ ಶೋವೊಂದರಲ್ಲಿ ಹೇಳಿದ್ದಾರೆ.
ಇಂತಹ ಕಡೆಗಳಲ್ಲಿ ಅವರು ಊಟ ಕೂಡಾ ಹೇಗೆ ಮಾಡುವುದಕ್ಕೆ ಆಗುತ್ತದೆ. ಇದೇ ಹಿಂದೂವಿನಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಪಾಕಿಸ್ತಾನ ಪರ ವಿಕೆಟ್ ಪಡೆಯುವ ಬಲ ಹೊಂದಿದ್ದರೆ ಕನೇರಿಯಾ ಆಡಬೇಕು. ಕನೇರಿಯಾ ಪ್ರಯತ್ನ ಇಲ್ಲದೆ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಆದ್ಯಾವ ಕ್ರೆಡಿಟ್ ಅವರಿಗೆ ಸಂದೇ ಇಲ್ಲ ಎಂದು ಅಖ್ತರ್ ತಿಳಿಸಿದ್ದಾರೆ.
39 ವರ್ಷದ ಕನೇರಿಯಾ 2009ರಲ್ಲಿ ಸ್ಪಾರ್ಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಬಳಿಕ ಕ್ಷಮೆಯಾಚಿಸಿದ್ದರು.
Comments are closed.