ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೂ ಪೈರಸಿ ಭೂತ ಕಾಡುತ್ತಿದ್ದು, ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಚಿತ್ರ ಆನ್ ಲೈನ್ ನಲ್ಲಿ ಲೀಕ್ ಆಗಿದೆ.
ಪೈರಸ್ ಗೆ ಕುಖ್ಯಾತಿ ಪಡೆದಿರುವ ತಮಿಳು ರಾಕರ್ಸ್ ತಂಡ ಈ ಕುಕೃತ್ಯ ಮಾಡಿದ್ದು, ತಮ್ಮ ವೆಬ್ ಸೈಟಿನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಲೀಕ್ ಮಾಡಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಇಂದು ಬೆಳಗ್ಗೆಯಷ್ಟೇ ತೆರೆ ಕಂಡು, ಉತ್ತಮ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ತಮಿಳು ರಾಕರ್ಸ್ ಕುಕೃತ್ಯದಿಂದಾಗಿ ಇದೀಗ ಚಿತ್ರದ ಕಲೆಕ್ಷನ್ ಮೇಲೆ ಪೆಟ್ಟು ಬೀಳುವ ಭೀತಿ ಎದುರಾಗಿದೆ.
ಕಿರಿಕ್ ಪಾರ್ಟಿ ಚಿತ್ರದ ಬಳಿಕ ಬರೊಬ್ಬರಿ ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಚಿತ್ರ ತೆರೆಕಂಡಿದೆ.
Comments are closed.