ಬೆಂಗಳೂರು: ಡ್ರಾಪ್ ಕೊಡುವುದಾಗಿ ಬೈಕಿನಲ್ಲಿ ಕರೆದುಕೊಂಡು ಹೋಗಿ ದಾರಿ ಮಧ್ಯದಲ್ಲಿ ಬೈಕ್ ನಿಲ್ಲಿಸಿ, ನನಗೆ ಕಿಸ್ ಕೊಟ್ಟರೆ ಮಾತ್ರ ಬೈಕ್ನಿಂದ ಇಳಿಸುವುದಾಗಿ ಕಾಮುಕನೊಬ್ಬ ದುಂಬಾಲು ಬಿದ್ದಿದ್ದ ಘಟನೆ ವಿಜ್ಞಾನ ನಗರದಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಹೆಚ್ಎಎಲ್ ಬಸ್ ನಿಲ್ದಾಣದಿಂದ ನಡೆದುಕೊಂಡು ಹೋಗುತ್ತಿದ್ದಳು. ಆಗ ಅಪರಿಚಿತ ಯುವಕನೊಬ್ಬ ಬಂದು, ನಾನು ಅದೇ ರೂಟ್ನಲ್ಲಿ ಹೋಗುತ್ತಿದ್ದೇನೆ. ಹೀಗಾಗಿ ವಿಜ್ಞಾನನಗರ ಬಿಡುವುದಾಗಿ ಒತ್ತಾಯ ಪೂರ್ವಕವಾಗಿ ಬೈಕ್ ಹತ್ತಿಸಿಕೊಂಡಿದ್ದಾನೆ.
ಎರಡು ಮೂರು ಕಿಲೋಮೀಟರ್ ತನಕ ಕರೆದುಕೊಂಡು ಹೋಗಿ ದಾರಿ ಮಧ್ಯದಲ್ಲಿ ಬೈಕ್ ನಿಲ್ಲಿಸಿದ್ದಾನೆ. ಯುವತಿ ಏಕಾಏಕಿ ದಾರಿ ಮಧ್ಯ ಬೈಕ್ ನಿಲ್ಲಿಸಿದ್ದನ್ನ ಕಂಡು ಯುವಕನಿಗೆ ಪ್ರಶ್ನಿಸಿದ್ದಾಳೆ. ಆಗ ಯುವಕ ನಾನು ಮದ್ಯಪಾನ ಮಾಡಿದ್ದೀನಿ, ನನಗೆ ನೀನು ಕಿಸ್ ಕೊಡಲೇಬೇಕೆಂದು ದುಂಬಾಲು ಬಿದ್ದಿದ್ದಾನೆ. ಕಾಮುಕ ಯುವಕನ ವರ್ತನೆಯಿಂದ ಭಯಬೀತಗೊಂಡ ಯುವತಿ ರಸ್ತೆ ಮಧ್ಯದಲ್ಲೇ ಚಿರಾಡಲು ಶುರು ಮಾಡಿದ್ದಾಳೆ. ಯುವತಿ ಕಿರುಚಾಡಲು ಆರಂಭಿಸುತ್ತಿದ್ದಂತೆ ಯುವತಿಯನ್ನ ಬಿಟ್ಟು ಅಲ್ಲಿಂದ ಯುವಕ ಎಸ್ಕೇಪ್ ಆಗಿದ್ದಾನೆ.
ಕಾಮುಕನ ವರ್ತನೆಯಿಂದ ಆತಂಕಗೊಂಡಿದ್ದ ಯುವತಿ ಸ್ನೇಹಿತೆಯ ಸಹಾಯದಿಂದ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ ಯುವತಿ ಟಿವಿಎಸ್ ಕಂಪನಿಯ ಐಡಿ ಕಾರ್ಡ್ ಧರಿಸಿಕೊಂಡಿದ್ದ ಎಂಬ ಮಾಹಿತಿ ನೀಡಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ರೋಡ್ ರೋಮಿಯೋಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Comments are closed.