ಕರಾವಳಿ

ಜನವರಿ 3ರಂದು ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಚತುರ್ಥ ಪುಣ್ಯತಿಥಿ ಆಚರಣೆ

Pinterest LinkedIn Tumblr

ಮಂಗಳೂರು :  ಶ್ರೀ ಕಾಶೀಮಠ ಸಂಸ್ಥಾನದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಚತುರ್ಥ ಪುಣ್ಯತಿಥಿ ಆರಾಧನಾ ಮಹೋತ್ಸವವು ಜನವರಿ 3ರಂದು ಹರಿದ್ವಾರದ ಶ್ರೀವ್ಯಾಸ ಮಂದಿರದ ಆವರಣದಲ್ಲಿರುವ ವೃಂದಾವನದಲ್ಲಿ  ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ*ಯವರ ಮಾರ್ಗದರ್ಶನ ಹಾಗೂ ದಿವ್ಯ ಕರಕಮಲಗಳಿಂದ ನೆರವೇರಲಿರುವುದು .

ಪುಣ್ಯ ತಿಥಿ ಆಚರಣೆಯಾದ ಪರ್ವ ದಿನದ ಪ್ರಾತ:ಕಾಲ  ಶ್ರೀಸಂಸ್ಥಾನದ ಆರಾಧ್ಯದೇವರಾದ ವ್ಯಾಸರಘುಪತಿ ದೇವರಿಗೆ ಶ್ರೀಗಳವರ ಅಮೃತ ಹಸ್ತಗಳಿಂದ  ಪಂಚಾಮೃತ,ಗಂಗಾಭಿಷೇಕ,ಪವಮಾನ ಅಭಿಷೇಕಗಳು  ನಡೆಯಲಿದ್ದು .ಬಳಿಕ  ವೃಂದಾವನದಲ್ಲಿ ಮುಖ್ಯಪ್ರಾಣ ದೇವರಿಗೆ ಪವಮಾನ ಅಭಿಷೇಕ  ನಡೆಯಲಿದ್ದು. ಸಾಯಂಕಾಲ  ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರುಗುಣಗಾನ  ಶ್ರೀಗಳವರಿಂದ ನಡೆಯಲಿರುವುದು.

ಕೊಚ್ಚಿನ್, ಮುಂಬಯಿ,ಮಂಗಳೂರು,ಕಾಂಞಗಾಡ್,ಬೆಂಗಳೂರು ಹಾಗೂ ವಿವಿಧ ಮಠ ಮಂದಿರಗಳ ಮೊಕ್ತೇಸರರು , ಪದಾಧಿಕಾರಿಗಳು, ವೈದಿಕ ರು , ಸಾವಿರಾರು ಸಮಾಜ ಭಾಂದವರು ಭಾಗವಹಿಸುವ ನೀರಿಕ್ಷೆಯಿದೆ.

ಚತುರ್ಥ ಪುಣ್ಯತಿಥಿ ಆರಾಧನಾ ಮಹೋತ್ಸವ ಪುಣ್ಯ ದಿನಂದಂದು ದೇಶಾದ್ಯಂತ ಜಿ ಯಸ್ ಬಿ ಸಮಾಜದ ಮಠ ಮಂದಿರಗಳಲ್ಲಿ ಪುಣ್ಯತಿಥಿ ಆಚರಿಸಲಾಗುವುದು ಎಂದು ಸ್ವಾಮಿಗಳ ಅಶ್ರಮದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Comments are closed.