ಫ್ಲೆಕ್ಸ್ ಸೀಡ್ಸ್ ಅಂದರೆ ಅಗಸೆ ಬೀಜ ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಇವೆ ಈ ಅಗಸೆ ಬೀಜ ಇತ್ತೀಚಿನ ದಿನಗಳಲ್ಲಿ ಕಾನೆ ಆಗಿದೆ ಎಷ್ಟೋ ಜನಕ್ಕೆ ಫ್ಲೆಕ್ಸ್ ಸೀಡ್ಸ್ ಅಂದರೆ ಅಗಸೆ ಬೀಜ ಎನ್ನುವುದೇ ತಿಳಿದಿಲ್ಲ ಇನ್ನೂ ಹಿಂದಿನ ಕಾಲದ ಜನರು ಇದರ ಮಹತ್ವ ತಿಳಿದು ಇದನ್ನು ತಮ್ಮ ದಿನ ನಿತ್ಯದ ಆಹಾರದಲ್ಲಿ ಸೇವಿಸುತ್ತಾ ಇದ್ದರೂ ಫ್ಲೆಕ್ಸ್ ಸೀಡ್ಸ್ ಅನ್ನು ಮೊದಲು ಈಜಿಪ್ಟ್ ನಲ್ಲಿ ನೆಫರೇಟಿ ಗಳು ಇದ್ದ ಕಾಲದಲ್ಲಿ ಬಳಸಲು ಆರಂಭಿಸಿದರು ಕ್ರಮೇಣ ಇದು ಎಲ್ಲರಿಗೂ ಚಿರ ಪರಿಚಿತ ಆಯಿತು ಇನ್ನೂ ಅಗಸೆ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಿದ್ದು ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಸಂತಾನ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯಕ ಅಲ್ಲದೆ ಕೂದಲಿನ ಹಲವು ಸಮಸ್ಯೆಗಳಿಗೆ ಇದು ರಾಮ ಬಾಣ ಇದರಲ್ಲಿ ವಿಟಮಿನ್ ಇ ಹೇರಳವಾಗಿ ಇದ್ದು ಇದ್ದು ಕೂದಲು ಉದುರುವ ಸಮಸ್ಯೆ ಹೊಟ್ಟಿನ ಸಮಸ್ಯೆ ಕೂದಲು ಬೆಳೆಯುವ ಸಮಸ್ಯೆ ಹೀಗೆ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.
ಕೂದಲಿನ ಆರೈಕೆಗೆ ಫ್ಲೆಕ್ಸ್ ಸೀಡ್ಸ್ ಉಪಯೋಗಕಾರಿ ಆದ ಮನೆ ಮದ್ದು ಎಂದು ತಿಳಿದಿದ್ದಾಯಿತು ಹಾಗಾದರೆ ಈ ಫ್ಲೆಕ್ಸ್ ಸೀಡ್ಸ್ ಅನ್ನು ಕೂದಲಿನ ಆರೈಕೆ ಮಾಡುವಾಗ ಹೇಗೆ ಉಪಯೋಗಿಸಬೇಕು ಎಂದು ಈಗ ತಿಳಿಯೋಣ. ಒಂದು ಚಿಕ್ಕ ಪಾತ್ರೆಗೆ ಒಂದು ಲೋಟ ನೀರು ಹಾಕಿ ಅದಕ್ಕೆ ಒಂದು ಚಮಚ ಫ್ಲೆಕ್ಸ್ ಸೀಡ್ಸ್ ಅಂದರೆ ಅಗಸೆ ಬೀಜವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಈ ನೀರನ್ನು ಕುದಿಯಲು ಇಟ್ಟು ಪಾತ್ರೆಯಲ್ಲಿ ಇರುವ ಒಂದು ಲೋಟ ನೀರು ಅರ್ಧ ಆಗುವ ವರೆಗೂ ಚೆನ್ನಾಗಿ ಕುದಿಸಿ. ಕುಡಿಯುವ ನೀರು ಜೆಲ್ ರೂಪದಲ್ಲಿ ಬರುವವರೆಗೂ ಸಣ್ಣ ಉರಿಯಲ್ಲಿ ಕುದಿಸಿ. ಈ ನೀರನ್ನು ಜೆಲ್ ರೂಪಕ್ಕೆ ಬಂದ ಅಗಸೆ ಬೀಜದ ನೀರನ್ನು ತಣ್ಣಗಾಗಲು ಬಿಡಿ ತಣ್ಣಗಾದ ಜೆಲ್ ಅನ್ನು ಒಂದು ಬಟ್ಟಲಲ್ಲಿ ಬಟ್ಟೆಯ ಸಹಾಯದಿಂದ ಸೋಸಿರಿ ನಂತರ ಒಂದು ಬಟ್ಟಲಲ್ಲಿ 2 ರಿಂದ 3 ಚಮಚ ಅಗಸೆ ಬೀಜ ಜೆಲ್ ಅನ್ನು ಹಾಕಿ ಅದಕ್ಕೆ
ಎರಡರಿಂದ ಮೂರು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಿಕ್ಸ್ ಮಾಡಿದ ಜೆಲ್ ಅನ್ನು ಒಂದು ಕಾಟ್ಟನ್ ಉಂದೆಯ ಸಹಾಯದಿಂದ ನಿಮ್ಮ ಕೂದಲಿನ ಬುಡ ದಿಂದ ತುದಿಯವರೆಗೂ ಹಚ್ಚಿ ಈ ರೀತಿಯಾಗಿ ಕೂದಲಿನ ಬುಡಕ್ಕೆ ಫ್ಲೆಕ್ಸ್ ಜೆಲ್ ಹಚ್ಚುವುದರಿಂದ ಕೂದಲಿನ ಬುಡವು ಗಟ್ಟಿಯಾಗಿ ಕೂದಲು ಉದುರುವ ಸಮಸ್ಯೆ ನಿವಾರಣೆ ಆಗುತ್ತದೆ ಅಷ್ಟೆ ಅಲ್ಲದೆ ಕೂದಲು ಆರೋಗ್ಯಕರವಾಗಿ ದಪ್ಪ ಮತ್ತು ಉದ್ದವಾಗಿ ಬೆಳೆಯುತ್ತದೆ ಈ ವಿಧಾನವನ್ನು ವಾರದಲ್ಲಿ ಎರಡು ಬಾರಿ ಮಾಡಿ ಫ್ಲೆಕ್ಸ್ ಜೆಲ್ ಅನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಗಳ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಕೆಮಿಕಲ್ ಕಡಿಮೆ ಇರುವ ಶಾಂಪೂ ಹಾಕಿ ತೊಳೆಯಿರಿ.
Comments are closed.