ಬಾಗ್ದಾದ್: ಅಮೆರಿಕಾ ಶುಕ್ರವಾರ ನಸುಕಿನ ಜಾವ ನಡೆಸಿದ ಸ್ಟ್ರೈಕ್ ನಲ್ಲಿ ಬಾಗ್ದಾದ್ ವಿಮಾನ ನಿಲ್ದಾಣ ರಸ್ತೆಯಲ್ಲಿ ಇರಾನಿನ ಉನ್ನತ ಸೇನಾಧಿಕಾರಿ ಕಾಸೆಮ್ ಸೊಲೈಮಾನಿ ಮತ್ತು ಇರಾಕ್ ಇರಾಕ್, ಇರಾನ್ ಇರಾಕ್, ಇರಾನ್ ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಹಶೆಡ್ ಅಲ್-ಶಾಬಿಯನ್ನು ಕೊಂದು ಹಾಕಿದೆ ಎಂದು ತಿಳಿಸಿದೆ.
ಹಶೆಡ್ ನ ಉಪ ಮುಖ್ಯಸ್ಥ ಅಬು ಮಹ್ದಿ ಅಲ್ -ಮುಹಂಡಿಸ್ ಮತ್ತು ಕ್ಯುಡ್ಸ್ ಪಡೆಯ ಮುಖ್ಯಸ್ಥ ಖ್ಯಾಸೆಮ್ ಸೊಲೈಮಾನಿ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಅದರ ಮೇಲೆ ಗುರಿಯಾಗಿಟ್ಟು ಕೊಂದು ಹಾಕಲಾಗಿದೆ ಎಂದು ಮಿಲಿಟರಿ ಪಡೆ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಮಧ್ಯರಾತ್ರಿ ನಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕ್ಷಿಪಣಿ ದಾಳಿಗೆ ಒಳಗಾಯಿತು ಎಂದು ಇರಾಕ್ ನ ಸೇನೆ ತಿಳಿಸಿದೆ.
ಹ್ಯಾಶೆಡ್ ಬೆಂಗಾವಲು ಪಡೆಯನ್ನು ಗುರಿಯಾಗಿಟ್ಟುಕೊಂಡು ನಡೆಸಿದ ರಾಕೆಟ್ ದಾಳಿಯಲ್ಲಿ ಪ್ರಮುಖ ನಾಯಕರು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಹಶೆಡ್ ಹೆಚ್ಚಾಗಿ-ಶಿಯಾ ಸಶಸ್ತ್ರ ಘಟಕಗಳ ಜಾಲವಾಗಿದೆ, ಅವರಲ್ಲಿ ಹಲವರು ಟೆಹ್ರಾನ್‌ನೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಇವರನ್ನು ಇರಾಕ್‌ನ ರಾಜ್ಯ ಭದ್ರತಾ ಪಡೆಗಳಲ್ಲಿ ಅಧಿಕೃತವಾಗಿ ಸೇರಿಸಿಕೊಳ್ಳಲಾಗಿದೆ. ಮುಹಂದಿಸ್ ಅವರು ಹಶೆದ್ ಅವರ ಉಪ ಮುಖ್ಯಸ್ಥರಾಗಿದ್ದು, ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು. ಇವರನ್ನು ಅಮೆರಿಕಾ ಕಪ್ಪು ಪಟ್ಟಿಗೆ ಸೇರಿಸಿತ್ತು.
Comments are closed.