ಉಡುಪಿ: ಆರ್ಥಿಕ ಸಮಸ್ಯೆಯಿಂದ ಮನನೊಂದು ಉಡುಪಿಯ ಜಿಲ್ಲಾ ಜೆಡಿಎಸ್ ವಕ್ತಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕೊರಂಗ್ರಪಾಡಿ ಬೈಲೂರಿನಲ್ಲಿ ನಡೆದಿದೆ.
ಜಿಲ್ಲಾ ಜಾತ್ಯತಿತ ಜನತಾ ದಳದ ವಕ್ತಾರ, ಭಿರ್ತಿ ಕೋ. ಅಪರೇಟಿವ್ ಸೊಸೈಟಿಯ ಕಾರ್ಯನಿರ್ವಾಹಣಾಧಿಕಾರಿ ಪ್ರದೀಪ್ ಜಿ. ಬೈಲೂರು(37) ಆತ್ಮಹತ್ಯೆಗೆ ಶರಣಾದವರು.
ನಿನ್ನೆ ರಾತ್ರಿ ಅವರ ತಂದೆ ತಾಯಿ ತೀರ್ಥಹಳ್ಳಿಯ ಮನೆಗೆ ಹೋಗಿದ್ದ ಸಂದರ್ಭ ಕೊರಂಗ್ರಪಾಡಿಯ ಗೇಟ್ ಜಂಕ್ಷನ್ ಬಳಿಯ ತನ್ನ ಬಾಡಿಗೆ ಮನೆಯಲ್ಲಿ ಇದ್ದ ಪ್ರದೀಪ್, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ಮಲಾಗಿದೆ.
ಆತ್ಮಹತ್ಯೆಗೆ ಆರ್ಥಿಕ ಮುಗ್ಗಟ್ಟು ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು ತನಿಖೆ ನಡೆಯುತ್ತಿದೆ.
Comments are closed.