ಮಂಗಳೂರು, ಜನವರಿ.03 : ಜಿ.ಆರ್.ಕೆ ಲಾಂಛನದಲ್ಲಿ ತಯಾರಾದ ಎ.ವಿ ಜಯರಾಜ್ ನಿರ್ದೇಶನದ ಗೌರಿ ಹೊಳ್ಳ ಮತ್ತು ಸುಹಾಸ್ ಹೊಳ್ಳ ನಿರ್ಮಾಣದ `ಕುದ್ಕನ ಮದ್ಮೆ’ ತುಳು ಸಿನಿಮಾ ಶುಕ್ರವಾರ ಬೆಳಗ್ಗೆ ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆ ಗೊಂಡಿತು.
ಕಾರ್ಯಕ್ರಮಕ್ಕೆ ವಿಶೇಷ ಅಥಿತಿಗಳಾಗಿ ಆಗಮಿಸಿದ ಗಣ್ಯರು ದೀಪ ಬೆಳಗಿಸುವ ಮೂಲ ಸಿನಿಮಾವನ್ನು ಬಿಡುಗಡೆಗೊಳಿಸಿ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಪ್ರಸರಣಾಧಿಕಾರಿ ಕದ್ರಿ ನವನೀತ ಶೆಟ್ಟಿ `ಕುದ್ಕನ ಮದ್ಮೆ’ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರಿದ್ದಾರೆ. ಹೀಗಾಗಿ ಹಾಸ್ಯಕ್ಕೆ ಏನೂ ಕೊರತೆ ಇರಲಾರದು. ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಚಲನ ಚಿತ್ರ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ಆರ್. ಧನರಾಜ್, ಶರತ್ ಕದ್ರಿ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಖ್ಯಾತ ನಟ ಭೋಜರಾಜ ವಾಮಂಜೂರು, ಪ್ರಮುಖರಾದ ಮಹೇಶ್ ಮೂರ್ತಿ ಸುರತ್ಕಲ್, ನಿರ್ಮಾಪಕರಾದ ಗೌರಿ ಆರ್ ಹೊಳ್ಳ, ಮಹಾಬಲೇಶ್ವರ ಹೊಳ್ಳ, ಸುಬ್ರಹ್ಮಣ್ಯ ಹೊಳ್ಳ, ನಿರ್ದೇಶಕ ಎ.ವಿ ಜಯರಾಜ್, ಸುಹಾಸ್ ಹೊಳ್ಳ, ಶಶಿರಾಜ್ ಕಾವೂರು, ಆನಂದ ಶೆಟ್ಟಿ ಅಡ್ಯಾರ್,ನಟಿ ಶೀತಲ್ ನಾಯಕ್, ಜೀವನ್ ಉಳ್ಳಾಲ್, ರಮೇಶ್ ರೈ ಕುಕ್ಕುವಳ್ಳಿ, ಕುಮಾರ್ ಬಂಗೇರ, ಗೌತಮ್ ವಿ ಶೆಟ್ಟಿ, ಶ್ರೀಶ ಭಂಡಾರಿ, ಚಂದ್ರಾವತಿ ವಸಂತ್, ಸುಧನ್ ಶ್ರೀಧರ್, ಪೃಥ್ವಿ ಅಂಬರ್, ಉದಯ ಆಳ್ವ ಸುರತ್ಕಲ್, ಯಶವಂತ ಶೆಟ್ಟಿ ಕೃಷ್ಣಾಪುರ, ಅರುಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
`ಕುದ್ಕನ ಮದ್ಮೆ’ ಸಿನಿಮಾ ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನಿಮಾಸ್, ಪಿ.ವಿ.ಆರ್, ಸಿನಿಪೊಲೀಸ್, ಉಡುಪಿಯಲ್ಲಿ ಅಲಂಕಾರ್, ಮಣಿಪಾಲದಲ್ಲಿ ಐನಾಕ್ಸ್, ಪುತ್ತೂರಿನಲ್ಲಿ ಅರುಣಾ, ಕಾಸರಗೋಡಿನಲ್ಲಿ ಕೃಷ್ಣಾ ಮೊದಲಾದ ಥಿಯೇಟರ್‌ನಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ.
ಕಥೆಯ ಸಾರಂಸ: ತುಳು ನಾಡಿನಲ್ಲಿ ಅನಾದಿಕಾಲದಿಂದಲೂ ಬಹಳ ಹೆಸರುವಾಸಿಯಾದ ಮನೆತನ `ಅರ್ಕಾಡಿ ಬರ್ಕೆ’ ಹಿರಿಯರ ಬಳುವಳಿಯಾಗಿ ಅಪಾರ ಆಸ್ತಿ-ಪಾಸ್ತಿ ಹೊಂದಿರುವ ಈ ಮನೆತನದ ಈಗಿನ ಸದಸ್ಯರಲ್ಲಿ ಪರಸ್ಪರ ವೈ ಮನಸ್ಸು. ಆದರೆ ಹಿರಿಯರ ವಿಲ್ ಪ್ರಕಾರ ಇವರೆಲ್ಲವೂ ಒಂದಾಗದೇ ಇದ್ದರೆ ಈ ಆಸ್ತಿ-ಪಾಸ್ತಿಗಳು ಇವರಿಗೆ ದಕ್ಕದು. ಈ ಆಸ್ತಿಯ ಆಸೆಗಾಗಿ ಇವರ ಮಧ್ಯೆ ಬಂದು ಸೇರುವ ಕೆಲವು ನಕಲಿ ಸಂಬಂಧಿಕರು ಬ್ರೋಕರುಗಳು-ಸಮಯ ಸಾಧಕರು. ಇವರುಗಳೆಲ್ಲಾ ಸೇರಿ ಸೃಷ್ಟಿಸುವ ಅವಾಂತರಗಳು. ಹೀಗೆ ಸಿನೆಮಾ ಸಂಪೂರ್ಣ ಹಾಸ್ಯಮಯವಾಗಿ ಸಾಗುತ್ತದೆ. ಈ ಮಧ್ಯೆ `ಅಪರಿಚಿತನೊಬ್ಬ’ ಈ ಮನೆಗೆ ಸೇರಿಕೊಳ್ಳುತ್ತಾನೆ. ನಾಯಕಿಯ ಅಪಹರಣವಾಗುತ್ತದೆ. ಜ್ಯೋತಿಷಿಯೊಬ್ಬರ ಸಲಹೆಯಂತೆ `ಮಳೆ ಮತ್ತು ಬಿಸಿಲು ಒಟ್ಟಾಗಿ ಬರುತ್ತಿರುವಾಗ’ ಈ ಮನೆಯಲ್ಲಿ ಮಳೆ ಮತ್ತು ಬಿಸಿಲು ಒಟ್ಟಾಗಿ ಬರುತ್ತಿರುವಾಗ ಈ ಮನೆಯಲ್ಲಿ ಒಂದು ಮದುವೆ ನಡೆದರೆ ಸಮಸ್ಯೆ ಬಗೆ ಹರಿಯುವುದೆಂದು ತಿಳಿದು ಮದುವೆಗೆ ಸಿದ್ಧರಾಗುತ್ತಾರೆ. ಇದೇ `ಕುದ್ಕನ ಮದ್ಮೆ’ ಇಲ್ಲಿ ಕುದುಕ ಯಾರು ಎಂಬುದು ಚಿತ್ರದಲ್ಲಿರುವ ಸಸ್ಪೆನ್ಸ್ ಎಂದು ಚಿತ್ರದ ನಿರ್ದೇಶಕ ಎ.ವಿ ಜಯರಾಜ್ ತಿಳಿಸಿದ್ದಾರೆ.
ನಿರ್ದೇಶಕ ಎ.ವಿ ಜಯರಾಜ್‌ರವರು ಹೇಳುವ ಪ್ರಕಾರ-ಇದೊಂದು ಸಂಪೂರ್ಣ ಕಾಮಿಡಿ-ಫ್ಯಾಮಿಲಿ ಓರಿಯೆಂಟೆಡ್ ಸಬ್ಜೆಕ್ಸ್ ಆಗಿದ್ದು, ಸಂಪೂರ್ಣ ಕುಟುಂಬ ಸಮೇತ ನೋಡುವಂತಹ ಚಿತ್ರ. ತುಳುವರಿಗೆ ಬೇಕಾದ ಕಾಮಿಡಿ, ಫೈಟ್ ಹಾಡುಗಳು ಇವೆ. ಸುರತ್ಕಲ್, ಖಂಡಿಗೆ, ಬೀಚ್, ಪೊಳಲಿ, ತಣ್ಣೀರು ಬಾವಿ ಸುತ್ತ ಮುತ್ತ ಚಿತ್ರೀಕರಣಗೊಂಡಿದೆ.
ಚಿತ್ರದಲ್ಲಿ ನಾಯಕನಾಗಿ ಪೃಥ್ವಿ ಅಂಬಾರ್ ಹಾಗೂ ನಾಯಕಿಯಾಗಿ ಶೀತಲ್ ನಾಯಕ್ ಅಭಿನಯಿಸಿದ್ದಾರೆ. ದೇವಿ ಪ್ರಕಾಶ್ ಉರ್ವ, ಕು| ಶ್ರೀಷಾ ಭಂಡಾರಿ, ಕಾರ್ತಿಕ್ ರಾವ್ ಮತ್ತು ಮುಂಬೈ ರಂಗ ಕಲಾವಿದೆ ಚಂದ್ರಾವತಿ ವಸಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪಿಂಕಿರಾಣಿ, ಶೋಭಾ ಶೆಟ್ಟಿ, ಜೀವನ್ ಉಳ್ಳಾಲ್, ಸೂರಜ್ ಸಾಲ್ಯಾನ್, ಮೋಹನ್ ಕೊಪ್ಪಳ, ಚೇತನ್ ಕದ್ರಿ ಸುಮತಿ ಹಂದೆ, ಉದಯ್ ಆಳ್ವ ಸುರತ್ಕಲ್, ಯಶವಂತ್ ಶೆಟ್ಟಿ ಕೃಷ್ಣಾಪುರ, ಸುನಿಲ್ ಪಡುಬಿದ್ರೆ, ಕೃಷ್ಣ ಸುರತ್ಕಲ್, ರವೀಶ್ ಜೋಗಿ, ಯೋಗೀಶ್, ಅರುಣ್ ಶೆಟ್ಟಿ, ಸುಮಿತ್ರಾ ರೈ, ಕಿಶೋರ್ ಡಿ ಶೆಟ್ಟಿ ತಾರಾಗಣದಲ್ಲಿದ್ದಾರೆ.
ಚಿತ್ರದ ಕತೆ -ಚಿತ್ರಕಥೆ: ಸುಧನ್ ಶ್ರೀಧರ್, ಛಾಯಾಗ್ರಹಣ: ಮಹಾಬಲೇಶ್ವರ ಹೊಳ್ಳ, ಸಂಕಲನ: ಸುಬ್ರಹ್ಮಣ್ಯ ಹೊಳ್ಳ, ಸಂಗೀತ: ರಾಹುಲ್ ಆಚಾರ್ಯ ಕುಂಬ್ಳೆ, ನೃತ್ಯ :ಅಕುಲ್ ಮಾಸ್ಟರ್, ಸಾಹಸ ಕೌರವ ವೆಂಕಟೇಶ್, ನಿರ್ದೇಶಕರು: ರಾಕೇಶ್, ನವೀನ್ ಶೆಟ್ಟಿ, ಅನಿರುದ್ಧ್ ಉಳ್ಳಾಲ್, ಕರುಣ್ ಶೆಟ್ಟಿ, ರೋಶನಿ, ಕಾವ್ಯ ಶರತ್, ಸಾಹಿತ್ಯ ಸಂಭಾಷಣೆ, ಸಹ ನಿರ್ದೇಶನ : ಜೀವನ್ ಉಳ್ಳಾಲ್, ನಿರ್ದೇಶನ ಎ.ವಿ ಜಯರಾಜ್, ನಿರ್ಮಾಪಕರು ಗೌರಿ ಆರ್. ಹೊಳ್ಳ ಮತ್ತು ಸುಹಾಸ್ ಹೊಳ್ಳ.
_Sathish Kapikad
Comments are closed.