ಕರ್ನಾಟಕ

ಸಿಸಿಟಿವಿಗಳನ್ನೇ ಕಳ್ಳತನ ಮಾಡುತ್ತಿರುವ ಖದೀಮ

Pinterest LinkedIn Tumblr


ಬೆಂಗಳೂರು: ಮನೆ ಮತ್ತು ಅಂಗಡಿಗಳ ಭದ್ರತೆಗಾಗಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿರುವ ಘಟನೆ ನಗರದ ಕಮಲಾನಗರದಲ್ಲಿ ನಡೆದಿದೆ.

ಕಮಲಾನಗರದ ರಸ್ತೆಯ ಅಂಗಡಿಯೊಂದರ ಬಳಿ ಅಳವಡಿಸಿದ್ದ ಸಿಸಿಟಿವಿಯನ್ನೇ ಕಳ್ಳ ಕದ್ದು ಎಸ್ಕೇಪ್ ಆಗಿದ್ದು, ಕಳ್ಳನ ಕೃತ್ಯ ಅದೇ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಂದಿನಂತೆ ಮಾಲೀಕ ಅಂಗಡಿಯನ್ನು ತೆರೆಯುವ ಸಂದರ್ಭದಲ್ಲಿ ಸಿಸಿಟಿವಿ ಕಳುವಾಗಿರುವುದು ಬೆಳಕಿಗೆ ಬಂದಿದೆ.

ನಡುರಾತ್ರಿಯಲ್ಲಿ ಅಂಗಡಿ ಬಳಿ ಎಂಟ್ರಿ ಕೊಟ್ಟ ಕದೀಮ ಕ್ಯಾಮೆರಾ ಕದ್ದು ಪರಾರಿಯಾಗಿದ್ದು, ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ ಶಾಪ್ ಮಾಲೀಕರಿಗೆ ಘಟನೆ ಶಾಕ್ ನೀಡಿದೆ. ಹಲವು ಕಳವು ಹಾಗೂ ಅಪರಾಧ ಪ್ರಕರಣಗಳಲ್ಲಿ ಸಿಸಿಟಿವಿ ದೃಶ್ಯಗಳೇ ಆರೋಪಿಗಳ ಬಂಧನಕ್ಕೆ ನೆರವು ನೀಡಿದೆ. ಆದರೆ ಈ ಪ್ರಕರಣದಲ್ಲಿ ಸಿಸಿಟಿವಿಯೇ ಕಳ್ಳತನವಾಗಿದೆ. ಘಟನೆಯ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.