ನಾಗಪಟ್ಟಣ(ತಮಿಳುನಾಡು): ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿನಿಯರು ಮದ್ಯಪಾನ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಲ್ವರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.
ಎರಡು ವಾರಗಳ ಹಿಂದೆ ಈ ವಿಡಿಯೋ ವೈರಲ್ ಆಗಿದೆ. ಸ್ನೇಹಿತೆಯ ಹುಟ್ಟುಹಬ್ಬದ ಪ್ರಯುಕ್ತ ಈ ನಾಲ್ವರು ಹುಡುಗಿಯರು ಮದ್ಯಪಾನ ಮಾಡಿದ್ದರು. ಅವರೇ ಈ ವಿಡಿಯೋ ಮಾಡಿದ್ದರು. ಈ ನಾಲ್ವರು ವಿದ್ಯಾರ್ಥಿಗಳು ಕಾಲೇಜು ಸಮವಸ್ತ್ರ ಧರಿಸಿ ಮದ್ಯಪಾನ ಮಾಡಿದ್ದರು. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರಿ ಟೀಕೆ ಎದುರಾಗಿತ್ತು.
ಕಾಲೇಜಿನ ಹೊರಗೆ ಈ ಘಟನೆ ನಡೆದಿದ್ದರೂ ಕಾಲೇಜಿನ ಘನತೆಗೆ ಘಟನೆಯಿಂದ ಚ್ಯುತಿ ಬರುವ ಕಾರಣ ಅವರನ್ನು ಅಮಾನತು ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಈ ರೀತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಈ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದವರೇ ಅವರಿಗೆ ನ್ಯಾಯ ಒದಗಿಸಬೇಕು. ನಮ್ಮ ಶಿಕ್ಷಣ ಸಂಸ್ಥೆಯ ಘನತೆಗೆ ಚ್ಯುತಿ ಬರುವ ಕಾರಣದಿಂದ ಈ ಕಠಿಣ ನಿರ್ಧಾರಕ್ಕೆ ಬರಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
Comments are closed.