ಶಿವಮೊಗ್ಗ: ಜೀವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಭದ್ರತೆ ಹೆಚ್ಚಿಸಲಾಗಿದೆ. ವಿಶೇಷ ಗನ್ ಮತ್ತು ಹೆಚ್ಚುವರಿ ಅಂಗರಕ್ಷಕನನ್ನು ಒದಗಿಸಲಾಗಿದೆ.
ಈವರೆಗೂ ಅವರಿಗೆ ಎಸ್ಕಾರ್ಟ್ ಮತ್ತು ಗನ್ಮ್ಯಾನ್ ಒದಗಿಸಲಾಗಿತ್ತು. ಈಗ ಹೆಚ್ಚುವರಿಯಾಗಿ ಅಂಗ ರಕ್ಷಕ ಹಾಗೂ ಆತನಿಗೆ ಎಕ್ಸ್ ಕ್ಯಾಲಿಬರ್ ಮಷಿನ್ಗನ್ ಒದಗಿಸಲಾಗಿದೆ.
ಫೋನ್ ಕರೆ ಕುರಿತು ಮಾತನಾಡಿದ ಸಚಿವರು, ನನ್ನ ಪಿಎ ಸಂತೋಷ್ ಬಳಿ ಫೋನ್ ಇದ್ದಾಗ ಕರೆ ಮಾಡಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಈಶ್ವರಪ್ಪ ಸಿಎಎ, 370 ಕಾಯ್ದೆ ಕುರಿತು ಮಾತನಾಡಬಾರದು. ಒಂದು ವೇಳೆ ಮಾತನಾಡಿದರೆ 48 ಗಂಟೆಯಲ್ಲಿ ಮುಗಿಸುತ್ತೇವೆ ಎಂದು ಹೆದರಿಸಿದ್ದಾರೆ. ಮಾತನಾಡುವ ವ್ಯಕ್ತಿ ತಮಿಳು, ಹಿಂದಿ, ಉರ್ದು ಮಿಶ್ರಿತ ಭಾಷೆ ಬಳಸುತ್ತಿದ್ದ.
ಮೊದಲು ಒಂದು ಮಿಸ್ಡ್ ಕಾಲ್ ಬಂದಿತ್ತು. ಬಳಿಕ ಮತ್ತೂಂದು ನಂಬರ್ನಿಂದ ಬೆದರಿಕೆ ಕರೆ ಬಂತು. ಈ ಕುರಿತು ಜಿಲ್ಲಾ ರಕ್ಷಣಾ ಧಿಕಾರಿ ಶಾಂತರಾಜು, ಎಡಿಜಿಪಿ ಕಮಲ್ ಪಂತ್, ಗೃಹ ಸಚಿವರಿಗೂ ಮಾಹಿತಿ ನೀಡಿದ್ದೇನೆ. ಹಿರಿಯ ಅ ಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ. ಈ ಬೆದರಿಕೆಗಳಿಗೆಲ್ಲ ಬಗ್ಗುವವನು ನಾನಲ್ಲ ಎಂದರು.
Comments are closed.