ನವದೆಹಲಿ: ಸ್ಮೃತಿ ಇರಾನಿ ಅವರು ಕೇಂದ್ರ ಸಚಿವೆಯಾಗಿ ತಮ್ಮ ವಿಶಿಷ್ಟ ಕೆಲಸಗಳ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಅದೇ ರೀತಿ ಕುಟುಂಬದ ಜೊತೆ ಕಾಲ ಕಳೆಯುವುದು, ಹರಟೆ, ಮೋಜು ಮಸ್ತಿ ಮಾಡುವುದರಿಂದಲೂ ಸುದ್ದಿಯಾಗುತ್ತಾರೆ. ಇದೀಗ ತಮ್ಮ ಕುಟುಂಬದ ಪ್ರೀತಿಯನ್ನು ಸೂಚಿಸುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಚಿವೆಯಾಗಿ ಆ್ಯಕ್ಟಿವ್ ಆಗಿರುವ ಸ್ಮೃತಿ ಇರಾನಿ ಅವರು, ಸಾಮಾಜಿಕ ಜಾಲತಾಣಗಳಲ್ಲಿಯೂ ಅಷ್ಟೇ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಕುಟುಂಬದ ಚಟುವಟಿಕೆಗಳ ಕುರಿತು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ತಮ್ಮ ಪತಿ ಹಾಗೂ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ನೆಟ್ಟಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.
ಸ್ಮೃತಿ ಇರಾನಿಯವರ ಪತಿ ಜುಬಿನ್ ಇರಾನಿ ಅವರು ತಮ್ಮ ಮೂವರು ಮಕ್ಕಳಾದ ಜೋಹ್ರ್ ಇರಾನಿ, ಜೋಯಿಶ್ ಇರಾನಿ ಹಾಗೂ ಶನೆಲ್ಲೆ ಇರಾನಿ ಯವರನ್ನು ಗಟ್ಟಿಯಾಗಿ ತಬ್ಬಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ‘ಮಿಯಾ ಫ್ಯಾಮಿಲಿಯಾ ಮೈ ಲೈಫ್ ಮೈ ಲವ್’ ಎಂಬ ಸಾಲನ್ನು ಬರೆದಿದ್ದಾರೆ.
ಈ ಚಿತ್ರವನ್ನು ಮೇಲಿಂದ ತೆಗೆಯಲಾಗಿದ್ದು, ತಂದೆ ಮಕ್ಕಳು ತಬ್ಬಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸ್ಮೃತಿ ಇರಾನಿಯವರು ಈ ವರ್ಷದಲ್ಲಿ ಹಂಚಿಕೊಂಡ ಕುಟುಂಬದ ಮೊದಲ ಚಿತ್ರ ಇದಾಗಿದೆ. ಸ್ಮೃತಿ ಇರಾನಿಯವರ ಬಹುತೇಕ ಪೋಸ್ಟ್ ಗಳು ನಗುವಿನಿಂದ ಕೂಡಿರುತ್ತವೆ. ಸ್ಮೃತಿ ಇರಾನಿಯವರು ಜವಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾರೆ.
Comments are closed.