ಅಂತರಾಷ್ಟ್ರೀಯ

ಅಂದು ಕೈ ಹಿಡಿದು ಎಳೆದ ಮಹಿಳೆಯೊಬ್ಬರಿಗೆ ಹೊಡೆದು, ಇಂದು ಕಿಸ್ ಕೊಟ್ಟ ಪೋಪ್

Pinterest LinkedIn Tumblr


ವ್ಯಾಟಿಕನ್ ಸಿಟಿ: ಕೈ ಹಿಡಿದು ಎಳೆದ ಮಹಿಳೆಯೊಬ್ಬರಿಗೆ ಹೊಡೆದಿದ್ದ ಪೋಪ್ ಈಗ ಸನ್ಯಾಸಿನಿಯೊಬ್ಬರಿಗೆ ಕಿಸ್ ಕೊಟ್ಟು ಸುದ್ದಿಯಾಗಿದ್ದಾರೆ.

ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ನಲ್ಲಿ ಪೋಪ್ ಫ್ರಾನ್ಸಿಸ್ ಅವರು ಹೊಸ ವರ್ಷದ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರುತ್ತಿದ್ದರು. ಈ ವೇಳೆ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಪೋಪ್ ಅವರ ಕೈಯನ್ನು ಹಿಡಿದು ಎಳೆದಿದ್ದರು. ಇಂದರಿಂದ ಕೋಪಗೊಂಡ ಪೋಪ್, ಮಹಿಳೆಯ ಕೈಗೆ ಹೊಡೆದು ಹೊರಟುಹೋದಿದ್ದರು. ಆದರೆ ಈಗ ಪೋಪ್ ಅವರು ಸನ್ಯಾಸಿನಿಯೊಬ್ಬರಿಗೆ ಮುತ್ತು ಕೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಚರ್ಚ್ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಸಭೆ ನಡೆದಿತ್ತು. ಈ ವೇಳೆ ಸನ್ಯಾಸಿನಿಯೊಬ್ಬರು ಸಭೆಗೆ ಆಗಮಿಸಿದ ಪೋಪ್ ಫ್ರಾನ್ಸಿಸ್ ಅವರಿಗೆ ಕಿಸ್ ಕೊಡುವಂತೆ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಫ್ರಾನ್ಸಿಸ್ ಅವರು, ಕೊಡುತ್ತೇನೆ. ಆದರೆ ನೀವು ಕಚ್ಚುತ್ತೀರಿ ಎಂದರು. ಹೀಗಾಗಿ ಅಲ್ಲಿ ಸೇರಿದ್ದ ಜನರು ನಗೆಗಡಲಲ್ಲಿ ತೇಲಿದರು.

ಮಾತು ಮುಂದುವರಿಸಿದ ಫ್ರಾನ್ಸಿಸ್ ಅವರು, ಶಾಂತವಾಗಿರಿ. ನಾನು ನಿಮಗೆ ಕಿಸ್ ನೀಡುತ್ತೇನೆ. ಆದರೆ ನೀವು ಶಾಂತವಾಗಿರಿ. ಕಚ್ಚಬೇಡಿ ಎಂದು ಮಹಿಳೆಯ ಬಳಿಗೆ ಹೋಗಿ ಸನ್ಯಾಸಿನಿಯ ಬಲ ಕೆನ್ನೆಗೆ ಮುತ್ತಿಕ್ಕಿದರು. ಆಗ ಸನ್ಯಾಸಿನಿಯು ಸಂಭ್ರಮಿಸುತ್ತಾ ಕ್ರೇಜಿ, ಪಾಪಾ ಎಂದು ಕೂಗಿ ಧನ್ಯವಾದ ತಿಳಿಸಿದರು.

Comments are closed.