ರಾಷ್ಟ್ರೀಯ

ಗೋಲ್ಡ್ ಲೋನ್ ಬ್ಯಾಂಕ್ ನಲ್ಲಿ 10 ಕೋಟಿ ರೂ. ದರೋಡೆ!

Pinterest LinkedIn Tumblr


ಅಹಮದಾಬಾದ್:ಇಂಡಿಯಾ ಇನ್ ಫೋ ಲೈನ್ ಲಿಮಿಟೆಡ್ (ಐಐಎಫ್ ಎಲ್) ಗೋಲ್ಡ್ ಲೋನ್ ಬ್ಯಾಂಕ್ ಗೆ ಆರು ಮಂದಿ ಮುಸುಕುಧಾರಿಗಳು ಏಕಾಏಕಿ ಒಳನುಗ್ಗಿ ಹತ್ತು ನಿಮಿಷಗಳಲ್ಲಿ ಹತ್ತು ಕೋಟಿ ರೂಪಾಯಿ ದರೋಡೆಗೈದಿರುವ ಘಟನೆ ಗುರುವಾರ ಗುಜರಾತ್ ನ ವಾಪಿಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಆರು ಮಂದಿ ಮುಸುಕುಧಾರಿಗಳು ಬ್ಯಾಂಕ್ ಗೆ ನುಗ್ಗಿ ಸಿಬ್ಬಂದಿಗಳನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ ನಂತರ ಹತ್ತು ಕೋಟಿ ರೂಪಾಯಿ ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ವಲ್ಸಾಡ್ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಜೋಶಿ ತಿಳಿಸಿದ್ದಾರೆ.

ಘಟನೆ ಬಗ್ಗೆ ತಿಳಿದ ನಂತರ ಮಹಾರಾಷ್ಟ್ರ ಗಡಿಸೇರಿದಂತೆ ಇಡೀ ನಗರದ ಪ್ರವೇಶ ದ್ವಾರಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದು ತಪಾಸಣೆ ನಡೆಸಲಾಗುತ್ತಿದೆ. ಸಿಸಿಟಿವಿ ಫೋಟೆಜ್ ನಲ್ಲಿ ಮುಸುಕುಧಾರಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಜೋಶಿ ತಿಳಿಸಿರುವುದಾಗಿ ವರದಿ ಹೇಳಿದೆ.

Comments are closed.