ಕ್ರೀಡೆ

ಹಸಿದ ಬಾಲಕನ ಜೊತೆ ಮೈದಾನದಲ್ಲೇ ಆಹಾರ ಹಂಚಿಕೊಂಡು ತಿಂದ ಭಾರತದ ಕ್ರಿಕೆಟ್ ಆಟಗಾರನ ಫೋಟೋ ವೈರಲ್ !

Pinterest LinkedIn Tumblr

ಹಸಿವು ಇಡೀ ಜಗತ್ತನ್ನೇ ಕಿತ್ತು ತಿನ್ನುತ್ತಿದೆ. ಕೆಲವರು ಹೊಟ್ಟೆ ತುಂಬ ತಿಂದರೆ ಇನ್ನು ಕೆಲವರು ಅರ್ಧ ಹೊಟ್ಟೆ ತಿನ್ನುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಹಸಿವಿನಿಂದಲೇ ನೀರು ಕುಡಿದು ಮಲಗುತ್ತಿದ್ದಾರೆ. ಹಸಿದ ಬಾಲಕನ ಜೊತೆ ಭಾರತದ ಆಟಗಾರರೊಬ್ಬರು ಮೈದಾನದಲ್ಲೇ ಆಹಾರ ಹಂಚಿ ತಿಂದಿರುವ ಫೋಟೋ ಇದೀಗ ವೈರಲ್ ಆಗಿದೆ.

ಭಾರತದ ಆಟಗಾರ ಇಕ್ಬಾಲ್ ಅಬ್ದುಲ್ಲಾ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಫೋಟೋಗಳು ಭಾವನಾತ್ಮಕವಾಗಿ ಸೆಳೆಯುತ್ತಿದೆ. ರಣಜಿ ಟ್ರೋಫಿ ಪಂದ್ಯದ ಅಭ್ಯಾಸದಲ್ಲಿ ನಿರತರಾಗಿದ್ದ ಎಡಗೈ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾರನ್ನು ನೋಡುತ್ತಾ ಮೈದಾನದ ಹೊರಗೆ ಮಗುವೊಂದು ನಿಂತಿತ್ತು.

ಇದನ್ನು ಗಮನಿಸಿದ ಇಕ್ಬಾಲ್ ಮಗುವನ್ನು ಹತ್ತಿರಕ್ಕೆ ಕರೆದಿದ್ದಾರೆ. ಮಗು ಹಸಿದಿದೆ ಎಂದು ತಿಳಿದ ಇಕ್ಬಾಲ್ ತನ್ನ ಬಳಿಯಿದ್ದ ಆಹಾರವನ್ನು ಇಬ್ಬರು ಹಂಚಿ ತಿಂದಿದ್ದಾರೆ.

ಇಕ್ಬಾಲ್ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಪರ ಆಡಿದ್ದರು.

Comments are closed.