ಮಂಗಳೂರು ಜನವರಿ 10 : ದ.ಕ ಜಿಲ್ಲೆಯ ಸುಳ್ಯ ತಾಲೂಕು ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿರುವ ಕಾಲಾವಧಿ ಉತ್ಸವದ ಸಮಯದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿಕೊಂಡು ಕಿರುಕುಳ ಉಂಟು ಮಾಡುವುದನ್ನು ತಪ್ಪಿಸಲು ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1)ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಮದ್ಯಮುಕ್ತ ಪ್ರದೇಶ ಎಂದು ಘೋಷಿಸಿ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಿಂಧು ಬಿ ರೂಪೇಶ್ ಆದೇಶಿಸಿರುತ್ತಾರೆ.
ಸುಳ್ಯ ನಗರವನ್ನು (ಸುಳ್ಯ ಕಸಬಾ ಮತ್ತು ಆಲೆಟ್ಟಿ) ಮದ್ಯ ಮುಕ್ತ ಪ್ರದೇಶವೆಂದು ಘೋಷಿಸಿ ಸುಳ್ಯ ಗ್ರಾಮದಲ್ಲಿರುವ ಬಾರ್ ಮತ್ತು ವೈನ್ ಶಾಪ್ ಮತ್ತು ಸರಕಾರಿ ಮದ್ಯ ಮಳಿಗೆಗಳನ್ನು ಜನವರಿ 11 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11.30 ರವರೆಗೆ ಬಂದ್ ಇರಿಸುವಂತೆ ಆದೇಶಿಸಲಾಗಿದೆ.
Comments are closed.