ಕುಂದಾಪುರ: ಮಕರ ಸಂಕ್ರಾತಿ ದಿನವಾದ ಬುಧವಾರದಂದು ಗೋಪಾಡಿ ರಾಷ್ಟ್ರೀಯ ಹೆದ್ದಾರಿ ಆಸುಪಾಸಿನಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ನಡೆಯಿತು.
ಗೋಪಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್ ನೇತೃತ್ವದಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸದಸ್ಯರು, ಅಮಲ ಭಾರತ ಮಾತಾ ಅಮೃತಾನಂದಮಯಿ ಸಮಿತಿ ಸದಸ್ಯರು, ಗೋಪಾಡಿ ಗ್ರಾಮಪಂಚಾಯತ್, ಎಫ್.ಎಸ್.ಎಲ್. ಸದಸ್ಯರು ಸೇರಿ 50ಕ್ಕೂ ಅಧಿಕ ಚೀಲಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಗೂ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ವಾಹನ ಮೂಲಕ ಸ್ಥಳಾಂತರ ಮಾಡಲಾಯಿತು.
ಈ ಸಂದರ್ಭ ಗೋಪಾಡಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್, ರೆಡ್ ಕ್ರಾಸ್ ಸಂಸ್ಥೆಯ ಶಿವರಾಮ, ಕ್ಲೀನ್ ಕುಂದಾಪುರ ಫ್ರಾಜೆಕ್ಟ್ ಸದಸ್ಯರು, ವಿವಿಧ ಸಂಸ್ಥೆಯ ಪದಾಧಿಕಾರಿಗಳು ಇದ್ದರು.
Comments are closed.