ಕರಾವಳಿ

ರಾತ್ರಿ ಹೊತ್ತು ಕಡಿಮೆ ನಿದ್ರೆ ಮಾಡುವವರಿಗೆ ಒಂದು ಆಘಾತಕಾರಿ ಸುದ್ದಿ.

Pinterest LinkedIn Tumblr

ರಾತ್ರಿ ಎಷ್ಟೇ ಬೇಗ ಮಲಗಿದರು ಕೂಡ ನಿದ್ರೆಯೇ ಬರುವುದಿಲ್ಲ ಬೆಳಿಗ್ಗೆ ಬೇಗ ಎದ್ದು ಕೆಲಸಕ್ಕೆ ಹೋದರೆ ದಿನಪೂರ್ತಿ ಕಣ್ಣುಉರಿ ರಾತ್ರಿಯೆಲ್ಲಾ ನಿದ್ದೆ ಬಾರದೆ ಹೊರಳಾಡಿ ಸಾಕಾಗುತ್ತದೆ ಹಾಗೇನೇ ನಿದ್ದೆ ಬರದ ಕಾರಣ ರಾತ್ರಿಯಿಡೀ ಮೊಬೈಲ್ ಹಿಡಿದುಕೊಂಡು ಕುರುತ್ತಾರೆ ಈ ಎಲ್ಲ ಲಕ್ಷಣಗಳೂ ಇಂದಿನ ಯುವ ಪೀಳಿಗೆಯ ಹುಡುಗ ಹಾಗೂ ಹುಡುಗಿಯರ ಸಾಮಾನ್ಯ ಸಮಸ್ಯೆಗಳು ನಾವು ನಿದ್ದೆ ಮಾಡಿದಷ್ಟು ಆರೋಗ್ಯ ಚನ್ನಾಗಿ ಇಟ್ಟುಕೊಳ್ಳಬಹುದು ಆದರೆ ದಿನವಿಡೀ ಗಣಕಯಂತ್ರದ ಮುಂದೆ ಕುಳಿತು ಮನೆಗೆ ಬಂದ ನಂತರ ದೂರದರ್ಶದಲ್ಲಿ ಮನರಂಜನೆ ಕಾರ್ಯಕ್ರಮಗಳನ್ನು ನೋಡುವುದು ಇಲ್ಲವೇ ಮತ್ತೆ ಯಥಾ ಪ್ರಕಾರ ಮೊಬೈಲ್ ಹಿಡಿದುಕೊಂಡು ಕುರುವಂತಹ ಇಂದಿನ ಯುವ ಪೀಳಿಗೆಗೆ ನಿದ್ದೆ ಸ್ವಲ್ಪ ದೂರವೇ ಸರಿ ಆದ್ರೆ ಇದರಿಂದ ಏನೆಲ್ಲ ಅಪಾಯಗಳಿವೆ ಎನ್ನುವುದು ನಿಮಗೆ ಗೊತ್ತಿಲ್ಲದ ಒಂದು ದೊಡ್ಡ ಸತ್ಯ.

ನಾವು ಆರೋಗ್ಯ ಪೂರ್ಣವಾಗಿರಬೇಕು ಅಂದರೆ ಚನ್ನಾಗಿ ಊಟ ಮಾಡುವುದರ ಜೊತೆಗೆ ಚನ್ನಾಗಿ ನಿದ್ದೆಯನ್ನು ಸಹ ಮಾಡಬೇಕು ದಿನವಿಡೀ ಕೆಲಸ ಮಾಡಿ ದಣಿದಂತಹ ಈ ದೇಹಕ್ಕೆ 7 ರಿಂದ 8 ತಾಸು ವಿಶ್ರಾಂತಿ ಬೇಕಾಗುತ್ತದೆ ಆಗ ನಮ್ಮ ದೇಹ ಎನ್ನುವ ಒಂದು ಯಂತ್ರ ಮರುದಿನ ಚನ್ನಾಗಿ ಲವಲವಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆ ಯಂತ್ರಕ್ಕೆ ಸರಿಯಾದ ವಿಶ್ರಾಂತಿ ಸಿಗಲಿಲ್ಲ ಎಂದಾಗ ಅನೇಕ ಸಮಸ್ಯೆಗಳು ಒಂದರ ನಂತರ ಒಂದು ಕಾಣಿಸಿಕೊಳ್ಳುತ್ತವೆ ಈ ಬಗ್ಗೆ ಒಂದು ಸಂಶೋಧನೆ ನಡೆಸಲಾಗಿದ್ದು ಅದರಿಂದ ಹೊರಬಂದಂತಹ ಮಾಹಿತಿ ನಿದ್ರೆಗೆಡಿಸುವಂತಿದೆ ಕಡಿಮೆ ನಿದ್ದೆ ಮಾಡುವುದರಿಂದ ಬಿ ಎಮ್ ಡಿ ಅಂದರೆ ಮೂಳೆಯ ಖನಿಜ ಸಾಂದ್ರತೆ ಮತ್ತು ಆಸ್ಟಿಯೋ ಪೊರೋಸಿಸ್ ಬೆಳೆವಣಿಗೆಯ ಹೆಚ್ಚಿನ ಅಪಾಯದೊಂದಿಗೆ ಸಂಬಂದ ಹೊಂದಿದೆ ಎಂದು ಸಂಶೋಧನೆಯೊಂದು ಹೇಳಿದೆ.

ಆಸ್ಟಿಯೋ ಪೊರೋಸಿಸ್ ಸಮಸ್ಯೆಯಿಂದ ಮೂಳೆ ದುರ್ಬಲಗೊಳ್ಳುವುದರಿಂದ ಮೂಳೆ ಮುರಿಯುವ ಅಪಾಯವಿರಲಿದೆ ಎಂದು ಸಂಶೋಧಕರು ಹೇಳಿದ್ದಾರೆ ಹಾಗೇನೇ ಕಡಿಮೆ ನಿದ್ದೆ ಮಾಡುವುದರಿಂದ ಮೂಳೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಮೆರಿಕಾದ ವಿಶ್ವವಿದ್ಯಾಲಯದ ಈ ಸಂಶೋಧನೆಯ ಪ್ರಮುಖ ಲೇಖಕ ಹಿತರ ಒಸ್ ಬಾಲ್ಕಾಮ್ ಹೇಳಿದ್ದಾರೆ. ಈ ಅಧ್ಯಯನಕ್ಕಾಗಿ ಋತುಮತಿಯರಾಗಿದ್ದ 11084 ಮಹಿಳೆಯರನ್ನು ಈ ಒಂದು ಅಧ್ಯಯನಕ್ಕೆ ಒಳಪಡಿಸಲಾಗಿತ್ತು ರಾತ್ರಿ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ದೆಯನ್ನು ಮಾಡುವ ಮಹಿಳೆಯರು ಬಿ ಎಮ್ ಡಿ ಸಮಸ್ಯೆಗೆ ಒಳಗಾಗಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ರಾತ್ರಿವೇಳೆ 5 ಗಂಟೆಗಿಂತ ಕಡಿಮೆ ನಿದ್ದೆ ಮಾಡುವ ಮಹಿಳೆಯರಲ್ಲಿ 22% ರಷ್ಟು ಜನ ಮೂಳೆಯ ಸಮಸ್ಯೆ ಮತ್ತು 63ರಷ್ಟು ಮಹಿಳೆಯರು ಸೊಂಟದ ಆಸ್ಟಿಯೋ ಪೊರೋಸಿಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ

ಎಂದು ಸಮೀಕ್ಷೆ ಹೇಳಿದೆ ಹೀಗಾಗಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ನಿದ್ರಾಹೀನತೆಯಿಂದ ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಾರೆ ಆದ್ದರಿಂದ ಮಹಿಳೆಯರು ನಿದ್ರೆ ಗೆಡುವ ಮುನ್ನ ಎಚ್ಚರ ವಹಿಸಬೇಕು. ಹಾಗಾಗಿ ರಾತ್ರಿ ಹೊತ್ತು ಏನೇ ಕಾರಣವಿರಲಿ ಹೆಚ್ಚಾಗಿ ನಿದ್ರೆಗೆಡಬೇಡಿ ಆದಷ್ಟು ನಿಮ್ಮ ದೇಹಕ್ಕೆ ನಿದ್ರೆಯ ಮೂಲಕ ವಿಶ್ರಾಂತಿಯನ್ನು ಕೊಡಿ ಆಗ ನೀವು ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ದೇಹವನ್ನು ಕೂಡ ಚೆನ್ನಾಗಿ ಇಟ್ಟುಕೊಳ್ಳಬಹುದು

Comments are closed.