ಆರೋಗ್ಯ

ಯೌವ್ವನ ಮತ್ತು ದಂತಗಳ ಆರೋಗ್ಯ ಉತ್ತಮವಾಗಿ ಇರಬೇಕು ಎಂದರೆ ಈ ಬೀಜಗಳ ಉಪಯೋಗ ಒಳ್ಳೆಯದು

Pinterest LinkedIn Tumblr

ನಿಮಗೆ ಯೌವನ ಸದಾಕಾಲ ಇರಬೇಕೆಂದರೆ ಈ ಬೀಜಗಳನ್ನು ಸೇವಿಸಿ. ಜನರು ಯೌವನ ಮತ್ತು ಹಲ್ಲುಗಳ ಒಂದು ಹೊಳಪಿಗಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ಕೆಮಿಕಲ್ ಮಿಶ್ರಿತ ಕ್ರಿಮ್ ಗಳನ್ನು ಬಳಸುತ್ತಾರೆ ಆದರೆ ಇದರಿಂದ ಉಪಯೋಗವಾಗುವ ಬದಲು ಸಾಕಷ್ಟು ಅಡ್ಡಪರಿಣಾಮ ಬೀರುತ್ತದೆ. ದುಬಾರಿ ಹಣ ಕೊಟ್ಟು ನಾವೇ ನಮ್ಮ ಕೈಯಾರೆ ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ ಆಗಿರುವ ಕಾರಣ ಈ ಲೇಖನದಲ್ಲಿ ತಿಳಿಸುವ ಕೆಲವೊಂದಿಷ್ಟು ಬೀಜಗಳನ್ನು ತಿನ್ನುವುದರಿಂದ ಸದಾಕಾಲ ಯೌವನದಿಂದ ಮತ್ತು ದಂತಗಳ ಹೊಳಪಿನಿಂದ ಇರಬಹುದು, ಹಾಗಾದರೆ ಆ ಬೀಜಗಳು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ. ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಯಾವುದೋ ಇದು ಹೊಸದು ಎಂದೆನಿಸುತ್ತದೆ ಆದರೆ ಇದು ನಮ್ಮ ಹಿರಿಯರಿಗೆ ಹೆಚ್ಚು ಪರಿಚಯ ನಮ್ಮ ಈಗಿನ ಜನಕ್ಕೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇನ್ನು ಕೆಲವರು ಲೋಟಸ್ ಸಿಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ ಎಂದು ಕರೆಯುತ್ತಾರೆ ಹಾಗಾದರೆ ಬನ್ನಿ ಸ್ನೇಹಿತರೆ ಈ ಬೀಜಗಳಲ್ಲಿರುವ ನಿಮ್ಮ ಆಯಸ್ಸನ್ನು ಹೆಚ್ಚಿಸುವ ವಿವಿಧ ಶಕ್ತಿಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಈ ಕಮಲದ ಬೀಜಗಳನ್ನು ಸಾರಿನಲ್ಲಿ ಕೆಲವರು ಬಳಸುತ್ತಾರೆ ಈ ಬೀಜಗಳನ್ನು ಒಣಗಿಸಿ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ತಮ್ಮ ಸಾಂಪ್ರದಾಯ ಔಷಧಿಗಳನ್ನು ತಯಾರಿಸುತ್ತಾರೆ. ಈ ಬೀಜಗಳಿಂದ ಸಾಕಷ್ಟು ಪೋಷಕಾಂಶಗಳು ನಮಗೆ ಸಿಗುತ್ತವೆ ಇವುಗಳಲ್ಲಿ ಪ್ರೋಟಿನೊಂದಿಗೆ ಮೆಗ್ನಿಶಿಯಮ್ ಪೊಟ್ಯಾಸಿಯಮ್ ಪಾಸ್ಪರಸ್ ನಂತಹ ಖನಿಜಗಳು ಮತ್ತು ಐರನ್ ಜಿಂಕ್ ನಂತಹ ಲೋಹದಾತುಗಳು ಹೆಚ್ಚಾಗಿ ಇರುತ್ತವೆ. ಈ ಕಮಲದ ಬೀಜಗಳಲ್ಲಿ ಎಲ್ ಐ ಸೋಯಾಸ್ಪರೈ ಮಿಟೈಲ್ ಟ್ರಂಸ್ಪರೆಟ್ ಎಂಬ ಏಂಜೆಮ್ ಇದೆ ಇದು ನಮ್ಮ ದೇಹದಲ್ಲಿ ಬಲಹೀನವಾದ ಕಣಜಾಲವನ್ನು ತುಂಬಾ ವೇಗವಾಗಿ ರಿಪೇರಿ ಮಾಡುತ್ತದೆ ಅದರಿಂದಾಗಿ ಇವುಗಳನ್ನು ತಿನ್ನುವವರು ಬಹಳಷ್ಟು ಕಾಲ ಯೌವ್ವನದ ಹುಮ್ಮಸ್ಸನ್ನು ಹೊಂದಿರುತ್ತಾರೆ ಹಾಗೂ ಹೆಚ್ಚುಕಾಲ ಬದುಕುತ್ತಾರೆ.

ಕಮಲದ ಬೀಜಗಳಲ್ಲಿನ ಈ ಗುಣದ ಕಾರಣದಿಂದ ಬಹಳಷ್ಟು ಸೌಂದರ್ಯ ವರ್ಧಕ ಕಂಪನಿಗಳು ಸಿಧ್ದಪಡಿಸುವ ಔಷಧಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಕಾಳುಗಳಲ್ಲಿ ಲಭ್ಯವಾಗುವ ಕಿಂಪ ಫೆರಾಲ್ ಎಂಬ ಪ್ಲೇವನೈಡ್ ಪೋಷಕವು ದವಡೆಯಲ್ಲಿ ಉಂಟಾಗುವ ನೋವು ಬಾವು ಉರಿಯನ್ನು ಸಮರ್ಥವಾಗಿ ನಿವಾರಿಸಿ ದಂತಗಳ ಆರೋಗ್ಯ ಚನ್ನಾಗಿರುವಂತೆ ಮಾಡುತ್ತದೆ. ಅದಕ್ಕಾಗಿಯೇ ಧೀರ್ಘಕಾಲದ ಯೌವ್ವನ ಮತ್ತು ದಂತಗಳ ಆರೋಗ್ಯ ಉತ್ತಮವಾಗಿ ಇರಬೇಕು ಎಂದರೆ ಕಮಲದ ಬೀಜಗಳನ್ನು ಉಪಯೋಗಿಸುವುದು ಒಳ್ಳೆಯದು. ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ನಂತರ ನಿಯಮಿತವಾಗಿ ಸೇವನೆ ಮಾಡುವುದು ಸೂಕ್ತ.

Comments are closed.