ಕೋಲಾರ: 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರಗೈದ 65 ರ ಹರೆಯದ ಅಪರಾಧಿಗೆ ಗಲ್ಲು ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ. ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಅತ್ಯಾಚಾರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಮುನಿಸ್ವಾಮಿ ಗೌಡ ವಾದ ಮಂಡಿಸಿದ್ದರು.
ಕೋಲಾರ ತಾಲೂಕಿನ ಬೈರಂಡಹಳ್ಳಿಯ ನಿವಾಸಿ ವೆಂಕಟೇಶಪ್ಪ ಅಪರಾಧಿಯಾಗಿದ್ದು, ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. 2018 ರ ಮೇ 1ರಂದು ಅಪರಾಧಿ ಸ್ವಗ್ರಾಮದಲ್ಲಿನ ಅಪ್ರಾಪ್ತೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದ. ವೇಮಗಲ್ ಠಾಣೆಯಲ್ಲಿ ವೆಂಕಟೇಶಪ್ಪ ವಿರುದ್ದ ಪೋಕ್ಸೋ ಅಡಿ ಪ್ರಕರಣ ದಾಖಲಾಗಿತ್ತು.
Comments are closed.