ಉಡುಪಿ: ಆನ್ಲೈನ್ ಮುಖಾಂತರ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು ಮೋಸಹೋದ ಮಹಿಳೆ ಉಡುಪಿಯ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾರ್ಕಳದ ಹುರ್ಮಲ ಕಟ್ಟೆ ಶಿರ್ವಾಶೆ ನಿವಾಸಿ ಉದಯ ಎಂಬವರ ಪತ್ನಿ ಶಕೀಲ ಕುಮಾರಿ ಅವರಿಗೆ ಕಳೆದ ಜೂ. 21ರಂದು shain.com ಎಂಬ ಕಂಪೆನಿಯಿಂದ ಸಂದೇಶ ಬಂದಿದೆ. ಅದೇ ಆಧಾರದಲ್ಲಿ ಶಕೀಲಾ ಅವರು ಉದ್ಯೋಗ ದೊರೆಯುವ ನಿರೀಕ್ಷೆಯಲ್ಲಿ ಅಗತ್ಯ ದಾಖಲೆಗಳನ್ನು recruiterservice314@gmail.comಗೆ ಮೇಲ್ ಮಾಡಿದ್ದರು. ಆ ಬಳಿಕ ರೂಪಾಯಿ 7,500 ನ್ನು ಗೂಗಲ್ ಪೇ ಮುಖೇನ ಪಾವತಿ ಮಾಡಿದ್ದರು. ಅಷ್ಟು ಮಾತ್ರವಲ್ಲದೇ ರಿಜಿಸ್ಟ್ರೇಷನ್ ಚಾರ್ಚ್, ಸರ್ವೀಸ್ ಚಾರ್ಚ್, ವಿಸಾ ವೆರಿಫಿಕೇಶನ್ ಚಾರ್ಚ್ ಹಾಗೂ ಇನ್ನಿತರ ಚಾರ್ಚ್ ಎಂದು 2 ಲಕ್ಷ ರೂಪಾಯಿಯನ್ನು ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿದ್ದರು.
2019ರ ನ.16ರಂದು ಕರೆ ಬಂದ ಹಿನ್ನಲೆಯಲ್ಲಿ 42 ಸಾವಿರ ರೂಪಾಯಿ ಹಾಗೂ 20 ಸಾವಿರ ರೂಪಾಯಿಯನ್ನು ಆನ್ಲೈನ್ ಮುಖಾಂತರ ವರ್ಗಾವಣೆ ಮಾಡಿದ್ದರು. ಹೀಗೆ ಸುಮಾರು 2,69,500 ರೂಪಾಯಿ ನೀಡಿದರೂ ಉದ್ಯೋಗ ನೀಡದೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಕೈಗೆತ್ತಿಕೊಂಡಿದ್ದಾರೆ.
Comments are closed.