ಮಂಗಳೂರು : ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ), ಮಂಗಳೂರು ಇದರ ಪಂಚಮ ವರ್ಷದ ಯಕ್ಷಧ್ರುವ ಪಟ್ಲ ಸಂಭ್ರಮ 2020 ಕಾರ್ಯಕ್ರಮವು ಮೇ. 30ರಂದು ಶನಿವಾರ ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿದ್ದು, ಆ ಪ್ರಯುಕ್ತ ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಹವ್ಯಾಸಿ ಕಲಾ ವಿದರಿಗಾಗಿ ಯಕ್ಷಗಾನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸರ್ಧೆಯು ಬೃಹತ್ ರೂಪದಲ್ಲಿ ನಡೆಯಲಿರುವುದ ರಿಂದ ಈ ಸ್ಪರ್ಧೆಯ ಪೂರ್ವಭಾವಿ ಯಾಗಿ ಉತ್ತಮ ತಂಡಗಳನ್ನು ಆಯ್ದು ಕೊಳ್ಳುವುದಕ್ಕಾಗಿ ಪರೀಕ್ಷಾವ ಲೋಕನ (ಆಡಿಷನ್) ಸುತ್ತಿನ ಸ್ಪರ್ಧೆ ಮಾರ್ಚ್ ತಿಂಗಳ 3ನೇ ವಾರದಲ್ಲಿ ನಡೆಯಲಿದೆ.
ಒಂದು ತಂಡದಲ್ಲಿ 8 ರಿಂದ 12 ಮುಮ್ಮೇಳ ಹವ್ಯಾಸಿ ಕಲಾವಿದರು ಹಾಗೂ ೪ ಹಿಮ್ಮೇಳ ಹವ್ಯಾಸಿ/ವೃತ್ತಿಪರ ಕಲಾವಿದರು ಭಾಗವಹಿಸ ಬಹುದು. ಒಂದು ತಂಡಕ್ಕೆ ಪರೀಕ್ಷಾವಲೋಕನ ಸುತ್ತಿನಲ್ಲಿ ಗರಿಷ್ಠ 20 ನಿಮಿಷಗಳ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ.
ಸ್ಫರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ಫೆಬ್ರವರಿ 15, ಶನಿವಾರದ ಒಳಗಾಗಿ ತಮ್ಮ ತಂಡದ ಹಿಮ್ಮೇಳ, ಮುಮ್ಮೇಳ ಕಲಾವಿದರ ಪಟ್ಟಿಯನ್ನು ಭಾವಚಿತ್ರ ಸಹಿತ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ಫ್ಲಾಟ್ ನಂ.202 ಕಮಲಾದೀಪ್ ಆಕರ್ಷತ್ ರೆಸಿಡೆನ್ಸಿ, 2ನೇ ಮಹಡಿ, ಅಡುಮರೋಳಿ, ಮಾರಿಕಾಂಬಾ ಟೆಂಪಲ್ ಹತ್ತಿರ, ನಂತೂರು ಮಂಗಳೂರು575005 ಅಥವಾ ಸಿ.ಎ ಸುದೇಶ್ ಕುಮಾರ್ ರೈ, ಕೋಶಾಧಿಕಾರಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ), 2ನೇ ಮಹಡಿ, ಎಂಪೈರ್ ಮಹಲ್. ಎಮ್.ಜಿ ರೋಡ್, ಮಂಗಳೂರು-575003ಈ ವಿಳಾಸಕ್ಕೆ ಸಲ್ಲಿಸಲು ಕೋರಲಾಗಿದೆ.
ಸ್ಫರ್ಧಾ ನಿಯಮಗಳು ಹಾಗೂ ಇತರ ವಿವರಗಳಿಗಾಗಿ ಮೊಬೈಲ್ ದೂರವಾಣಿ ೯೯೦೦೩೭೧೪೪೧ / ೯೪೪೮೬೨೭೨೧೫/ ೯೮೪೫೧೭೨೮೬೫ ಸಂಪರ್ಕಿಸಬಹುದಾ ಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.