ರಾಷ್ಟ್ರೀಯ

ತಮ್ಮ ಪುತ್ರಿಯ ಫೋಟೋ ನೋಡಿ ಕ್ರಿಕೆಟಿಗ ಮೊಹಮ್ಮದ್​ ಶಮಿ ಫಿದಾ.!

Pinterest LinkedIn Tumblr


ನವದೆಹಲಿ: ನ್ಯೂಜಿಲೆಂಡ್​ ವಿರುದ್ಧದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತದ ರೋಚಕವಾಗಿ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಒಬ್ಬರಾದ ಮೊಹಮ್ಮದ್ ಶಮಿ, ತಮ್ಮ ಮಗಳ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸದ್ಯ ನ್ಯೂಜಿಲೆಂಡ್‌ ವಿರುದ್ಧದ ಪ್ರವಾಸದಲ್ಲಿರುವ ಶಮಿ ತಮ್ಮ ಮಗಳ ಹಸೀನ್ ಚಿತ್ರವವನ್ನು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಪೊಟೋದಲ್ಲಿರುವ ಹಸೀನ್ ಹಳದಿ ಸೀರೆ ಧರಿಸಿರುವುದನ್ನು ನಾವು ಕಾಣಬಹುದು. ಅಲ್ಲದೇ ಈ ಪೊಟೋವನ್ನ ಶಿರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದು, ನಿನ್ನ ನೋಟ ತುಂಬಾ ಚೆನ್ನಾಗಿದೆ ಮಗಳೆ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ದೇವರು ಒಳ್ಳೆಯದು ಮಾಡಲಿ ಮಗಳೇ, ಆದಷ್ಟು ಬೇಗನೇ ನಿನ್ನನ್ನು ನೋಡುತ್ತೇನೆ ಎಂದಿದ್ದಾರೆ.

ನ್ಯೂಜಿಲೆಂಡ್​ ವಿರುದ್ಧದ ಭಾರತ 3ನೇ ಟಿ-20ಯ ಅಂತಿಮ ಓವರ್‌ನಲ್ಲಿ ಶಮಿ ತಮ್ಮ ಬೌಲಿಂಗ್​ ಶೈಲಿಯ ಕೈಚಳಕ ತೋರಿಸಿದ್ದರು. ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್​ ತಂಡಕ್ಕೆ ಒಂಬತ್ತು ರನ್‌ಗಳ ಅಗತ್ಯವಿರುವಾಗ, ನ್ಯೂಜಿಲೆಂಡ್ ತಂಡಕ್ಕೆ ಶಮಿ ಅಘಾತ ನೀಡಿದ್ದರು. ಪಂದ್ಯದ ನಿರ್ಣಯಕ ಓವರ್​​ನ ​ಮೊದಲ ಎಸೆತವನ್ನ ಪುಲ್​​ಟಾಸ್​ನ್ನ ಉಪಯೋಗಿಸಿಕೊಳ್ಳುವ ರಾಸ್​ ಟೇಲರ್​​ ಮಿಡ್‌ವಿಕೆಟ್‌ನ ಮೇಲೆ ಶಮಿಗೆ ಸಿಕ್ಸರ್​ ಬಾರಿಸ್ತಾರೆ.

ಕೊನೆಯ ಓವರ್​ನ ಎರಡನೆ ಎಸೆತದಲ್ಲಿ ಶಮಿ ಕೇವಲ​ ರನ್ ಬಿಟ್ಟುಕೊಡ್ತಾರೆ. ಇನ್ನು ಶಮಿ ಮೂರನೇ ಎಸೆತ ಎದುರಿಸಿದ ವಿಲಿಯಮ್ಸನ್​ ಆಫ್​ ಸ್ಟಂಪ್​ ಎಸೆತವನ್ನ ಥರ್ಡ್ ಮ್ಯಾನ್ ಫೀಲ್ಡರ್​ನತ್ತ ತಳ್ಳಲೆತ್ನಿಸಿ ವಿಕೆಟ್​ ಕೀಪರ್ ರಾಹುಲ್​ಗೆ ಕ್ಯಾಚ್​ ನೀಡಿ ಹೊರನಡೆಯುತ್ತಾರೆ.

20ನೇ ಓವರ್​ನ 4ನೇ ಎಸೆತವನ್ನ ಬೌನ್ಸ್​ ಎಸೆದ ಮಹಮ್ಮದ್ ಶಮಿ, ಟಿಮ್ ಸೀಫರ್ಟ್​ರಿಂದ ಡಾಟ್​ ಮಾಡಿಸುತ್ತಾರೆ. 5ನೇ ಎಸೆತವನ್ನ ಬೌನ್ಸ್​ ಎಸೆದ ಮಹಮ್ಮದ್ ಶಮಿ, ಟಿಮ್ ಸೀಫರ್ಟ್​ರಿಂದ ಬಾಲ್​ ಡಾಟ್​ ಮಾಡಿಸುವಲ್ಲಿ ಯಶಸ್ವಿಯಾಗ್ತಾರೆ. ಆದರೆ, ನಾನ್ ಸ್ಟ್ರೈಕ್​ನಲ್ಲಿದ್ದ ರಾಸ್​ ಟೇಲರ್ ಬೈಸ್​ ಮೂಲಕ 1 ರನ್ ಕಲೆಹಾಕಿ ಪಂದ್ಯ ಟೈ ಮಾಡ್ತಾರೆ.

1 ರನ್.. 1 ಎಸೆತ.. ಉಭಯ ಆಟಗಾರರು ಸೇರಿದಂತೆ ಕ್ರಿಕೆಟ್​ ಅಭಿಮಾನಿಗಳನ್ನ ಎದ್ದು ನಿಲ್ಲುವಂತೆ ಮಾಡಿದ್ದ ಎಸೆತ. ಒಂದು ರನ್ ತೆಗೆದು ತಂಡಕ್ಕೆ ಗೆಲುವಿನ ಸಿಹಿ ನೀಡುವ ಲೆಕ್ಕಚಾರದ್ದ ರಾಸ್​ ಟೇಲರ್​, ಶಮಿಯ ಆಫ್​ಸೈಡ್​ ಹೊಡೆಯಲು ಹೋಗಿ ಬೌಲ್ಡ್​ ಆಗಿ ನಿರಾಸೆ ಅನುಭವಿಸ್ತಾರೆ. ಅಂತಿಮ ಎಸೆತದಲ್ಲಿ ಮ್ಯಾಜಿಕ್ ಮಾಡಿದ ಶಮಿ ಪಂದ್ಯವನ್ನ ಟೈನಲ್ಲೇ ಮುಕ್ತಾಯಗೊಳಿಸುತ್ತಾರೆ.

Comments are closed.