ಶಾಂಘೈ: ಚೀನಾದಲ್ಲಿ ಕಂಡುಬಂದಿರುವ ಮಹಾಮಾರಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 213ಕ್ಕೇ ಏರಿದೆ. ಜಗತ್ತಿನಾದ್ಯಂತ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಿಶ್ವ ಅರೋಗ್ಯ ಸಂಸ್ಥೆ(WHO) ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ.
ಹುಬೈ ಪ್ರಾಂತ್ಯದಲ್ಲೇ ಸಾವನ್ನಪ್ಪಿದವರ ಸಂಕ್ಯೆ 204ಕ್ಕೇ ಏರಿದ್ದು, 9,692 ಹೊಸ ಪ್ರಕರಣಗಳು ಪತ್ತೆಯಾಗಿವೆ. ಚೀನಾದ ಆರೋಗ್ಯ ಅಧಿಕಾರಿಗಳ ಪ್ರಕಾರ 18 ದೇಶಗಳಲ್ಲಿ 100 ಪ್ರಕರಣಗಳು ಪತ್ತೆಯಾಗಿದ್ದು ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ 18 ದೇಶಗಳಲ್ಲಿ ಸೋಂಕು ಹಬ್ಬಿರುವ ಕುರಿತ ಮಾಹಿತಿಯನ್ನು ಖಚಿತಪಡಿಸಿದೆ. ಇಟಲಿ ಕೂಡ ತನ್ನ ದೇಶಕ್ಕೆ ಬಂದಿರುವ ಇಬ್ಬರು ಚೀನಾ ಪ್ರವಾಸಿಗರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಘೋಷಿಸಿದೆ. ಆ ಮೂಲಕ ಇಟಲಿ ಮತ್ತು ಚೀನಾಕ್ಕೆ ಇರುವ ಎಲ್ಲಾ ವಿಮಾನ ಸೇವೆಗಳನ್ನು ರದ್ದುಪಡಿಸಿದೆ.
Comments are closed.