ರಾಷ್ಟ್ರೀಯ

ಗಲ್ಲು ಜಾರಿಯಾಗುವುದಿಲ್ಲ: ನಿರ್ಭಯಾ ತಾಯಿಗೆ ಅತ್ಯಾಚಾರಿಗಳ ಪರ ವಕೀಲ

Pinterest LinkedIn Tumblr


ಹೊಸದಿಲ್ಲಿ: ‘ಅಪರಾಧಿಗಳಿಗೆ ಎಂದಿಗೂ ಗಲ್ಲು ಶಿಕ್ಷೆ ಜಾರಿಯಾಗಲ್ಲ’ ಎಂಬುದಾಗಿ ಅಪರಾಧಿಗಳ ಪರ ವಕೀಲ ಎಪಿ ಸಿಂಗ್‌ ಕೋರ್ಟ್‌ ಆವರಣದಲ್ಲೇ ನನಗೆ ಸವಾಲು ಹಾಕಿದ್ದಾರೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಹೇಳಿದರು.

ದಿಲ್ಲಿ ನ್ಯಾಯಾಲಯ ಅತ್ಯಾಚಾರಿಗಳ ಗಲ್ಲು ಶಿಕ್ಷೆಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿದ ಬೆನ್ನಲ್ಲೇ ಆಕ್ರೋಶದಿಂದ ಪ್ರತಿಕ್ರಿಯೆ ನೀಡಿರುವ ಅವರು, “ನಾನು ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ಸರಕಾರ ಅಪರಾಧಿಗಳನ್ನು ಗಲ್ಲಿಗೇರಿಸಲೇಬೇಕು,” ಎಂದು ಗುಡುಗಿದರು.

ಶನಿವಾರ (ಫೆಬ್ರವರಿ 1) ಬೆಳಿಗ್ಗೆ 6 ಗಂಟೆಗೆ ನಿರ್ಭಯಾ ಅತ್ಯಾಚಾರಿಗಳು ನೇಣಿಗೇರಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸದಂತೆ ತಡೆ ನೀಡಿದರು. ಈ ಆದೇಶ ಹೊರ ಬೀಳುತ್ತಿದ್ದಂತೆ ಆಶಾ ದೇವಿ ಕಣ್ಣೀರು ಹಾಕುತ್ತಲೇ ಮಾಧ್ಯಮದ ಮುಂದೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಅನಿರ್ದಿಷ್ಟಾವಧಿ ಮುಂದೂಡಿಕೆ

“ನಮ್ಮ ನಿರೀಕ್ಷೆಗಳು ಹುಸಿಯಾಗಿವೆ. ಆದರೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೆ ನಾನು ನನ್ನ ಹೋರಾಟವನ್ನು ಮುಂದುವರಿಸುತ್ತೇನೆ,” ಎಂದು ಆಶಾ ದೇವಿ ತಿಳಿಸಿದರು.

Comments are closed.