ಕರಾವಳಿ

ಪೊಲೀಸ್ ಠಾಣೆಯಲ್ಲೇ ಮಹಿಳಾ ಎಎಸ್ಐ ಮೇಲೆ ಹಲ್ಲೆ ಮಾಡಿದ ಮಹಿಳೆ!

Pinterest LinkedIn Tumblr

ಉಡುಪಿ: ಮಹಿಳಾ ಎಎಸ್ಐ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿ ಅವ್ಯಾಚವಾಗಿ ಬೈದು ನಿಂಧಿಸಿದ ಘಟನೆ ಸೋಮವಾರ ಮಧ್ಯಾಹ್ನ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಉಡುಪಿ ಮಹಿಳಾ ಪೊಲೀಸ್ ಠಾಣೆ ಎಎಸ್ಐ (ಸಹಾಯಕ ಉಪನಿರೀಕ್ಷಕಿ) ಮುಕ್ತ ಬಾಯಿ ಎನ್ನುವರ ಮೇಲೆ ಹಲ್ಲೆ ನಡೆದಿದ್ದು ಕೊಡಂಕೂರಿನ ಉಷಾ ನಾಯ್ಕ್ ಹಲ್ಲೆ ಮಾಡಿದ ಮಹಿಳೆ.

ಘಟನೆ ವಿವರ: ಮುಕ್ತ ಬಾಯಿ ಅವರು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಳೆದ 4 ವರ್ಷಗಳಿಂದ ಮಹಿಳಾ ಎ.ಎಸ್.ಐ ಆಗಿ ಕೆಲಸ ಮಾಡಿಕೊಂಡಿದ್ದು ನಾಲ್ಕು ದಿನಗಳ ರಜೆಯನ್ನು ಮುಗಿಸಿ ಫೆ.3 ಸೋಮವಾರದಂದು ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇಂದು ಮಧ್ಯಾಹ್ನ 11:30ರ ಸುಮಾರಿಗೆ ಉಷಾ ನಾಯ್ಕ್ ಎಂನ್ನುವರು ಠಾಣೆಗೆ ಬಂದಿದ್ದು ಮುಕ್ತ ಬಾಯಿ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು ಇದನ್ನು ಪ್ರಶ್ನಿಸಿದ ಮುಕ್ತ ಬಾಯಿಯವರನ್ನು ದೂಡಿ ಕೈಯಿಂದ ಎಡಕೆ ಕೆನ್ನೆ ಭಾಗಕ್ಕೆ ಹೊಡೆದು ಮತ್ತಷ್ಟು ಹಲ್ಲೆಗೆ ಮುಂದಾದಾಗ ಠಾಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿಯವರು ತಡೆದಿದ್ದಾರೆ. ಇದೆಲ್ಲದರ ಬಳಿಕವೂ ‘ಕಲಿಸುತ್ತೇನೆ’ ಎಂದು ಬೈದು ಠಾಣೆಯಲ್ಲಿದ್ದ ಇತರ ಸಂದರ್ಶಕರ ಎದುರು ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.