ಕರ್ನಾಟಕ

40 ಎಕರೆ ಸ್ಥಳದಲ್ಲಿ ನಿಖಿಲ್‌ ಕುಮಾರಸ್ವಾಮಿಯ ಮದುವೆ

Pinterest LinkedIn Tumblr


ರಾಮನಗರ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿಯ ವಿವಾಹವನ್ನು ರಾಮನಗರ-ಚನ್ನಪಟ್ಟಣ ನಗರಗಳಿಗೆ ಸಮೀಪ ಇರುವ ವಿಶಾಲವಾದ ಸ್ಥಳದಲ್ಲಿ ನಡೆಸಲು ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಅರ್ಚಕರಹಳ್ಳಿ ಬಳಿ ಇರುವ ಸ್ಥಳದ ಪರಿಶೀಲನೆ ನಡೆಸಿದರು.

ಕುಮಾರಸ್ವಾಮಿಯವರು ತಮ್ಮ ಆತ್ಮೀಯರೊಂದಿಗೆ ಅರ್ಚಕರಹಳ್ಳಿ ಸಮೀಪ ಜಾನಪದ ಲೋಕದ ಪಕ್ಕದಲ್ಲಿ ವಿಶಾಲವಾದ ಜಮೀನಿನ ವೀಕ್ಷಣೆ ನಡೆಸಿದರು. ಭೂಮಾಲೀಕರ ಬಳಿಯೂ ಮಾತುಕತೆ ನಡೆಸಿದರು. ನಿಖಿಲ್‌ ಮದುವೆ ಕಾರ್ಯಕ್ಕಾಗಿ ವೀಕ್ಷಿಸಿರುವ ಜಾಗ ಸುಮಾರು 40 ಎಕರೆಗೂ ಹೆಚ್ಚಿನ ಪ್ರದೇಶವ್ಯಾಪ್ತಿ ಹೊಂದಿದೆ. ಇದರಲ್ಲಿ ಸೆಂಟ್ರಲ್‌ ಮುಸ್ಲಿಂ ಅಸೋಸಿಯೇಷನ್‌(ಸಿಎಂಎ)ಗೆ ಸೇರಿದ 22 ಎಕರೆ, ಉದ್ಯಮಿಯೊಬ್ಬರಿಗೆ ಸೇರಿದ 23 ಎಕರೆ ಹಾಗೂ ಉಳಿಕೆ ಭೂಮಿ ಇತರರ ಒಡೆತನದಲ್ಲಿದೆ.

ರಾಮನಗರದಿಂದ 5 ಕಿ.ಮೀ. ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ. ದೂರದಲ್ಲಿರುವ ಈ ಸ್ಥಳ, ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿಯೇ ಇದೆ. ಫೆ. 7ರಂದು ಅನಿತಾ ಕುಮಾರಸ್ವಾಮಿ ಸ್ಥಳದ ಪರಿಶೀಲನೆ ನಡೆಸಲಿದ್ದಾರೆ. ಮದುವೆಗೆ ಬರುವವರ ಅನುಕೂಲಕ್ಕಾಗಿ ಎರಡೂ ನಗರಗಳಿಂದ ಸಾರಿಗೆ ಬಸ್‌ ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Comments are closed.