ಅಂತರಾಷ್ಟ್ರೀಯ

ಕೊರೊನಾ ವೈರಸ್: ಸಾವಿನ ಸಂಖ್ಯೆ ಮುಚ್ಚಿಡುತ್ತಿರುವ ಚೀನ?

Pinterest LinkedIn Tumblr


ಬೀಜಿಂಗ್‌/ಹೊಸದಿಲ್ಲಿ: ಕೊರೊನಾ ವೈರಸ್‌ಗೆ ಬಲಿಯಾದವರ ಸಂಖ್ಯೆ ಗುರುವಾರ 636ಕ್ಕೇರಿದ್ದು, ಸೋಂಕಿತರ ಸಂಖ್ಯೆ 31 ಸಾವಿರ ದಾಟಿದೆ ಎಂದು ಚೀನ ಹೇಳಿದೆ. ಆದರೆ ಆ ದೇಶವು ನೈಜ ಸಾವಿನ ಸಂಖ್ಯೆ ಯನ್ನು ಮುಚ್ಚಿಟ್ಟು, ಜಗತ್ತಿನ ಕಣ್ಣಿಗೆ ಮಣ್ಣೆರಚು ತ್ತಿದೆಯೇ ಎಂಬ ಅನುಮಾನ  ಮೂಡಿದೆ.

ಇದಕ್ಕೆ ಕಾರಣ ಚೀನದ ಟೆನ್ಸೆಂಟ್‌ ಎಂಬ ಮಾಧ್ಯಮ ಸಂಸ್ಥೆಯೊಂದರ ಸೋರಿಕೆಯಾದ ವರದಿ. ಆ ವರದಿಯಲ್ಲಿ ಕೊರೊನಾ ಸೋಂಕು ಚೀನವೊಂದರಲ್ಲೇ 1.54 ಲಕ್ಷ ಮಂದಿಗೆ ತಗುಲಿದ್ದು, 24,589 ಮಂದಿ ಸಾವಿ ಗೀಡಾಗಿ ದ್ದಾರೆ ಎಂದು ಹೇಳಲಾಗಿದೆ. ಇದು ಚೀನ ನೀಡಿರುವ ಅಧಿಕೃತ ಅಂಕಿಸಂಖ್ಯೆಗೆ ಹೋಲಿಸಿದರೆ ಕ್ರಮವಾಗಿ 80 ಮತ್ತು 10 ಪಟ್ಟು ಹೆಚ್ಚಿದೆ. ಅಚ್ಚರಿಯೆಂದರೆ ಈ ವರದಿ ಆಕಸ್ಮಿಕವಾಗಿ ಪ್ರಕಟವಾಗಿದ್ದು, ಈ ಕುರಿತ ಚರ್ಚೆ ಆರಂಭವಾದ ಕೂಡಲೇ ವೆಬ್‌ಸೈಟ್‌ ಆ ವರದಿಯನ್ನು ಅಳಿಸಿ, ಅಧಿಕೃತ ಅಂಕಿಅಂಶವನ್ನೇ ಪ್ರಕಟಿಸಿದೆ. ಈ ನಡುವೆ ಭಾರತ ಪ್ರವಾಸಕ್ಕೆಂದು ಚೀನ ದಿಂದ ಬಂದ 25 ವರ್ಷದ ಯುವಕನಿಗೆ ಯಾರೂ ಹೋಟೆಲ್‌ ಕೊಠಡಿ ನೀಡಲು ಸಿದ್ಧ ರಿಲ್ಲದ ಕಾರಣ ಆತ ಕೇರಳ ಪೊಲೀಸರ ಮೊರೆ ಹೊಕ್ಕ ಘಟನೆ ನಡೆದಿದೆ.

640 ಭಾರತೀಯರು ವಾಪಸ್‌
ಕೇಂದ್ರ ಸರಕಾರವು ಒಟ್ಟು 640 ಭಾರ ತೀಯ ರನ್ನು ವುಹಾನ್‌ನಿಂದ ಕರೆತಂದಿದೆ. ಇನ್ನೂ 10 ಮಂದಿ ಸ್ವದೇಶಕ್ಕೆ ಮರಳಲು ಸಿದ್ಧರಿದ್ದರೂ ವೈದ್ಯಕೀಯ ತಪಾಸಣೆ ಬಳಿಕ ಅವರನ್ನು ಅಲ್ಲಿಂದ ಹೊರಡಲು ಬಿಡಲಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಈ ಮಧ್ಯೆ ಚೀನದಲ್ಲಿರುವ 19 ವಿದೇಶಿ ನಾಗರಿಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಚೀನ ಗುರುವಾರ ತಿಳಿಸಿದೆ. ಆದರೆ ಅವರ ರಾಷ್ಟ್ರೀಯತೆಯನ್ನು ಬಹಿರಂಗಪಡಿಸಿಲ್ಲ.

ಎಚ್ಚರಿಸಿದ್ದ ವೈದ್ಯ ಸಾವು
ವಿಪರ್ಯಾಸದ ಬೆಳವಣಿಗೆಯೊಂದರಲ್ಲಿ, ಕೊರೊನಾ ವೈರಸ್‌ ದಾಳಿಗೂ ಮುನ್ನವೇ ಅದರ ಅಪಾಯದ ಬಗ್ಗೆ ಜಗತ್ತಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದ ಚೀನದ ಎಂಟು ವೈದ್ಯರಲ್ಲೊಬ್ಬರಾದ ಲೀ ವೆನ್‌ಲಿಯಾಂಗ್‌ ಅದೇ ವೈರಸ್‌ಗೆ ತುತ್ತಾಗಿ ಪ್ರಾಣತೆತ್ತಿದ್ದಾರೆ. ವುಹಾನ್‌ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ ಎಂದು ಚೀನ ಸರಕಾರ ಪ್ರಕಟಿಸಿದೆ.

Comments are closed.