ಮನೋರಂಜನೆ

ನನ್ನ ಚಾಕಲೇಟ್ ಕೇಕ್ ರೀತಿ ನೋಡುವವರು ಬೇಕು – ಬಾಲಿವುಡ್ ನಟಿ ಊರ್ವಶಿ ರೌಟೇಲಾ

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಆದರೆ ಈ ಬಾರಿ ಅವರು ಬೋಲ್ಡ್ ಲುಕ್‍ನಲ್ಲಿ ಪೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಲ್ಲದೇ ‘ನನ್ನನ್ನು ಚಾಕಲೇಟ್ ಕೇಕ್ ರೀತಿ ನೋಡೋರು ಬೇಕು’ ಎಂದು ಪೋಸ್ಟ್ ಮಾಡಿ ಸಖತ್ ಸುದ್ದಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಊರ್ವಶಿ ರೌಟೇಲಾ ತುಂಬಾ ಆಕ್ಟಿವ್ ಆಗಿರುತ್ತರೆ. ಊರ್ವಶಿ ತಮ್ಮ ಹಾಟ್ ಹಾಗೂ ಬೋಲ್ಡ್ ಲುಕ್‍ಗೆ ಸಿಕ್ಕಾಪಟ್ಟೆ ಫೇಮಸ್. ಇಂತಹ ನಟಿ 65ನೇ ಫಿಲ್ಮ್‌ಫೇರ್ 2020 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಸ್ಲಿಟ್ ಗೌನ್ ತೊಟ್ಟು ಎಲ್ಲರ ಗಮನ ಸೆಳೆದಿದ್ದರು. ಈ ಗೌನ್‍ನಲ್ಲಿ ಊರ್ವಶಿ ಸಿಕ್ಕಾಪಟ್ಟೆ ಹಾಟ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಹಾಟ್ ಲುಕ್ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಅವರು ಹಂಚಿಕೊಂಡ ಪೋಸ್ಟ್ ಕೂಡ ಸಖತ್ ಸದ್ದು ಮಾಡುತ್ತಿದೆ.

“ನಾನು ಚಾಕೊಲೇಟ್ ಕೇಕನ್ನು ಹೇಗೆ ನೋಡುತ್ತೇನೋ ಅದೇ ರೀತಿ ಯಾರಾದರು ನನ್ನನ್ನು ನೋಡೋರು ಬೇಕು” ಎಂದು ಬರೆದು ತಮ್ಮ ಬೋಲ್ಡ್ ಲುಕ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಊರ್ವಶಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗಿದೆ. ಈವೆರೆಗೆ ಊರ್ವರ್ಶಿ ಅವರ ಬೋಲ್ಡ್ ಪೋಸ್ಟ್ ನ್ನು 9 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಈ ಹಿಂದೆ ಐರಾವತ ಬೆಡಗಿ ಊರ್ವಶಿ ರೌಟೇಲಾ ಕಾರ್ಯಕ್ರಮವೊಂದರಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆದಿದ್ದ ಸುದ್ದಿ ಸಖತ್ ಸದ್ದುಮಾಡಿತ್ತು.

ಡಿಸೆಂಬರ್ 31ರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಹೊಸ ವರ್ಷ ಆಚರಿಸಲು ಬಾಲಿವುಡ್ ಕಾರ್ನಿವಲ್ 2020 ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಊರ್ವಶಿ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು

ಹೊಸ ವರ್ಷದ ಕಾರ್ಯಕ್ರಮದಲ್ಲಿ ಊರ್ವಶಿ, ‘ಡ್ಯಾಡಿ ಮಮ್ಮಿ’, ‘ಹಸಿನೋ ಕಾ ದೀವಾನಾ’ ಹಾಗೂ ತಾವು ನಟಿಸಿದ ‘ಪಾಗಲ್‍ಪಂತಿ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದರು. ಡ್ಯಾನ್ಸ್ ಮಾಡುವ ಮೊದಲು ಊರ್ವಶಿ ತಮ್ಮ ಇನ್‍ಸ್ಟಾದಲ್ಲಿ ವಿಡಿಯೋ ಹಾಕುವ ಮೂಲಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು.

Comments are closed.