ಕರಾವಳಿ

ಉಡುಪಿಯ ಬೆಳ್ಳಂಪಳ್ಳಿಯಲ್ಲಿ ಹೊಟೇಲ್ ಉದ್ಯಮಿಯ ಕಡಿದು ಕೊಲೆ

Pinterest LinkedIn Tumblr

ಉಡುಪಿ: ಮುಂಬೈ ಮೂಲದ ಹೊಟೇಲ್ ಉದ್ಯಮಿಯೊಬ್ಬರನ್ನು ಕಡಿದು ಕೊಲೆ ಮಾಡಿರುವ ಘಟನೆ ನಡೆದಿದ್ದು ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಗ್ರಾಮದ ಸಮೀಪ‌ ಕುಕ್ಕೆಹಳ್ಳಿ ಎಂಬಲ್ಲಿ ಅವರ ಶವ ಪತ್ತೆಯಾಗಿದೆ.

ಮಹಾರಾಷ್ಟ್ರದ ಮುಂಬಯಿ ಮಾಯಾ ಹೊಟೇಲ್ ನ ಮಾಲೀಕ ವಶಿಷ್ಠ ಯಾದವ್ ಕೊಲೆಯಾದ ವ್ಯಕ್ತಿ. ಹೊಟೇಲ್ ವ್ಯಾಪಾರದ ಹಣ ವಿಷಯದಲ್ಲಿ ಈ ಹಿಂದೆ ಸ್ನೇಹಿತರ ನಡುವೆ ಜಗಳ ನಡೆದಿತ್ತು. ಅದೇ ವಿಚಾರದಲ್ಲಿ ಹೊಟೇಲ್ ಮಾಲೀಕನನ್ನು ಮುಂಬಯಿಯಿಂದ ಊರಿಗೆ ಕರೆತಂದು ಸ್ನೇಹಿತರು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಮಾಯಾ ಹೊಟೇಲ್ ವಿಚಾರದಲ್ಲಿ ಸುಧೀರ್ ಎಂಬವರಿಗೆ ಹಲ್ಲೆಯಾಗಿತ್ತು.

ಕೊಲೆಯಾದ ಹೊಟೇಲ್ ಮಾಲೀಕ ವಶಿಷ್ಠ ಯಾದವ್ ಹಣದ ವಿಚಾರದಲ್ಲಿ ಮೋಸ ಮಾಡಿದ್ದರು ಎನ್ನುವ ಆರೋಪ ಇತ್ತು ಎನ್ನಲಾಗಿದೆ. ಆತ ಹೊಟೇಲ್ ವ್ಯವಹಾರದಲ್ಲಿ ಅಡ್ವಾನ್ಸ್ ತೆಗೆದುಕೊಂಡ ಹಣ ವಾಪಸು ಕೊಡುತ್ತಿರಲಿಲ್ಲ ಎನ್ನಲಾಗಿದೆ. ಅದೇ ವಿಚಾರದಲ್ಲಿ ಕೆಲವರ ಬಳಿ ದ್ವೇಷ ಕಟ್ಟಿಕೊಂಡಿದ್ದ ಎನ್ನಲಾಗಿದೆ. ಆ ವಿಚಾರಕ್ಕೆ ಕೊಲೆ ಆಗಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.

ಹಿರಿಯಡಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

Comments are closed.