ಮಂಗಳೂರು / ಮೆಲ್ಭೊರ್ನ್, ವಿಕ್ಟೋರಿಯಾ, ಆಸ್ಟ್ರೇಲಿಯಾ, ಫ಼ೆಬ್ರವರಿ 20 : ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಆಸ್ಟ್ರೇಲಿಯಾದಲ್ಲಿ ಪ್ರತಿಷ್ಠಾಪಿತವಾದ ಶ್ರೀ ವೆಂಕಟಕೃಷ್ಣ ವೃಂದಾವನ ಸಂಸ್ಥೆ ಇಂದ ಅದ್ಧೂರಿಯಾಗಿ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಆಚರಿಸಲ್ಪಟ್ಟ ಶ್ರೀ ಶ್ರೀನಿವಾಸ ಕಲ್ಯಾಣ ಮಹೊತ್ಸವದಲ್ಲಿ ಪಾಲ್ಗೊಂಡ ಆಸ್ಟ್ರೇಲಿಯಾದ ಗಡಿ ಸುರಕ್ಷೆ ಹಾಗೂ ಸಮುದಾಯ ಸಂಸ್ಕೃತಿಯ ಮಂತ್ರಿಗಳಾದ ಶ್ರೀ ಎನ್ವರ್ ಎರ್ಡೊಗನ್ (ಯಂ,ಪಿ) ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾವಿಸಿ ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯವು ಇತ್ತೀಚಿನ ಕಾಲ್ಗಿಚ್ಚಿನ ಮಹಾದುರಂತದ ಸಂದರ್ಭದಲ್ಲಿ ಶ್ರೀ ವೆಂಕಟಕೃಷ್ಣ ವೃಂದಾವನದ ಮೂಲಕ ಸಲ್ಲಿಸಿದ ಸೇವೆಯನ್ನು ಸ್ಮರಿಸಿದ ಸಚಿವರು ಭಾರತೀಯ ಸಮುದಾಯದ ಶಾಂತಿಪ್ರಿಯತೆ ಮತ್ತು ಸಾಂಸ್ಕೃತಿಕ ಸಂಪತ್ತಿನ ಬಗ್ಗೆ ಉಲ್ಲೇಖಿಸಿ ತಮ್ಮ ತೀವ್ರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಜಗತ್ತಿನಾದ್ಯಂತ ಪಸರಿಸಿರುವ ಶ್ರೀ ವೆಂಕಟಕೃಷ್ಣ ವೃಂದಾವನ ದೇಗುಲ ಸರಪಳಿಯ ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಭೊರ್ನ್, 2 ಮಹಾನಗರಗಳಲ್ಲಿ ತನ್ನ ಶಾಖೆಯನ್ನು ಹೊಂದಿರುತ್ತದೆ.
Comments are closed.