ವಾಷಿಂಗ್ಟನ್: ತಾಯಿಯೇ ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿ ಅಪ್ರಾಪ್ತ ಮಗನನ್ನು ಬಂಧಿಸಿರುವ ಘಟನೆ ಅಮೆರಿಕದ ಮೇರಿಲ್ಯಾಂಡ್ನಲ್ಲಿ ನಡೆದಿದೆ.
ಮಹಿಳೆ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಮೇರಿಲ್ಯಾಂಡ್ನಲ್ಲಿ ವಾಸಿಸುತ್ತಿದ್ದರು. 14 ವರ್ಷದ ಹಿರಿಯ ಮಗ ಸೊಲೊಮನ್ ಪ್ಯುಯೆಲ್ ಮತ್ತು ಎರಡು ವರ್ಷದ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದರು. ಒಂದು ರಾತ್ರಿ ತಾಯಿ ತನ್ನ ಕಿರಿಯ ಮಗನನ್ನು ಮಲಗಿಸಲು ರೂಮಿಗೆ ಹೋಗಿದ್ದರು.
ಈ ವೇಳೆ ಹಿರಿಯ ಮಗ ಪ್ಯುಯೆಲ್ ತನ್ನ ಸೋದರಸಂಬಂಧಿ ಹುಡುಗಿಯೊಂದಿಗೆ ಮಹಡಿಯ ರೂಮಿನಲ್ಲಿ ಆಟವಾಡುತ್ತಿದ್ದನು. ಅವರಿಬ್ಬರ ಮಾತು ತಾಯಿಗೆ ಕೇಳಿಸುತಿತ್ತು. ಸ್ವಲ್ಪ ಸಮಯದ ನಂತರ ಇಬ್ಬರ ಮಾತು ಕೇಳಿಸಲಿಲ್ಲ. ಆಗ ತಾಯಿ ಆಟವಾಡುತ್ತಾ ಇಬ್ಬರು ಮಲಗಿರಬೇಕೆಂದು ಭಾವಿಸಿದ್ದರು. ಹೀಗಾಗಿ ನಂತರ ಮಕ್ಕಳಿಗೆ ಎಚ್ಚರವಾಗಬಾರದೆಂದು ನಿಧಾನವಾಗಿ ರೂಮಿಗೆ ಹೋಗಿದ್ದಾರೆ.
ಆದರೆ ರೂಮಿನಲ್ಲಿ ಮಗ ಸಂಬಂಧಿ ಹುಡುಗಿಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದನು. ಇದನ್ನು ನೋಡಿದ ತಾಯಿ ಶಾಕ್ ಆಗಿದ್ದು, ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ನನ್ನ ಹಿರಿಯ ಮಗ ಪ್ಯುಯೆಲ್ ತನ್ನ ಸೋದರಸಂಬಂಧಿ ಹುಡುಗಿಯೊಂದಿಗೆ ಸೆಕ್ಸ್ ಮಾಡುತ್ತಿದ್ದನು ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ತಾಯಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿ ಪ್ಯುಯೆಲ್ನನ್ನು ಬಂಧಿಸಿದ್ದಾರೆ.
Comments are closed.