ಮನೋರಂಜನೆ

ಸನ್ನಿ ಲಿಯೋನ್‌ ನಂಬರ್‌ ಕೇಳಿದ ನಟನಿಗೆ ತಿರುಗೇಟು

Pinterest LinkedIn Tumblr


ಸನ್ನಿ ಲಿಯೋನ್‌ ಎಂದರೆ ಎಲ್ಲರ ಕಿವಿ ಒಮ್ಮೆಲೇ ಚುರುಕಾಗುತ್ತದೆ. ಅಷ್ಟರಮಟ್ಟಿಗೆ ಅವರು ಹವಾ ಸೃಷ್ಟಿಸಿದ್ದಾರೆ. ಹಾಗಂತ ಅವರ ಬಗ್ಗೆ ಕ್ರೇಜ್‌ ಹೆಚ್ಚಿಸಿಕೊಂಡಿರುವುದು ಪಡ್ಡೆ ಹುಡುಗರು ಮಾತ್ರವಲ್ಲ, ಎಲ್ಲ ವಯೋಮಾನದವರಿಗೂ ಸನ್ನಿ ಬಗ್ಗೆ ಒಲವು. ಅದಕ್ಕೊಂದು ಬೆಸ್ಟ್‌ ಉದಾಹರಣೆ ಈಗ ಸಿಕ್ಕಿದೆ.

ಅದು ಇತ್ತೀಚೆಗೆ ನಡೆದ ಒಂದು ಕಲರ್‌ಫುಲ್‌ ಕಾರ್ಯಕ್ರಮ. ಅಲ್ಲಿಗೆ ನಟಿ ಸನ್ನಿ ಲಿಯೋನ್‌ ಬಂದಿದ್ದರು. ಅವರನ್ನು ನೋಡಲು ಅನೇಕರು ಜಮಾಯಿಸಿದ್ದರು. ಜೊತೆಗೆ ಬಾಲಿವುಡ್‌ ಸೆಲೆಬ್ರಿಟಿಗಳ ದೊಡ್ಡ ಬಳಗವೇ ಅಲ್ಲಿ ನೆರೆದಿತ್ತು. ಆ ಸಮಯವನ್ನೇ ಬಳಸಿಕೊಂಡ ಹಿರಿಯ ನಟ ಕಬೀರ್‌ ಬೇಡಿ ಒಂದು ಪ್ಲ್ಯಾನ್‌ ಮಾಡಿದರು. ಕಾರ್ಯಕ್ರಮದಲ್ಲಿ ಖುಷಿಖುಷಿಯಿಂದ ಓಡಾಡಿಕೊಂಡಿದ್ದ ಸನ್ನಿ ಲಿಯೋನ್‌ ಬಳಿಗೆ ತೆರಳಿ ‘ನಿಮ್ಮ ಫೋನ್‌ ನಂಬರ್‌ ಕೊಡಿ’ ಎಂದು ಕೇಳಿಯೇ ಬಿಟ್ಟರು.

74 ವರ್ಷದ ನಟ ಕಬೀರ್‌ ಬೇಡಿ ಹೀಗೆ ಎಲ್ಲರ ಸಮ್ಮುಖದಲ್ಲಿ ಫೋನ್‌ ನಂಬರ್‌ ಕೇಳಿದಾಗ ಸನ್ನಿ ಲಿಯೋನ್ ಕಿಂಚಿತ್ತೂ ವಿಚಲಿತರಾಗಲೇ ಇಲ್ಲ! ಇಂಥ ಸಂದರ್ಭಗಳನ್ನು ಹೇಗೆ ಹ್ಯಾಂಡಲ್‌ ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ಕರಗತ ಆದಂತಿದೆ. ಕಬೀರ್‌ ಮಾಡಿದ ಮನವಿಯನ್ನು ತುಂಬ ಕೂಲ್‌ ಆಗಿಯೇ ಸನ್ನಿ ಸ್ವೀಕರಿದರು. ತಮ್ಮ ನಂಬರ್‌ ಕೊಡುವ ಬದಲಿಗೆ ಪತಿ ಡೇನಿಯಲ್‌ ವೆಬ್ಬರ್‌ ಅವರ ಫೋನ್‌ ನಂಬರ್‌ ಅನ್ನು ನೀಡಿ ಕೈ ತೊಳೆದುಕೊಂಡರು!

ಇನ್ನು, ಈ ಸಂದರ್ಭದಲ್ಲಿ ಕಬೀರ್‌ ಬೇಡಿಯವರ ಖಾಸಗಿ ಬದುಕಿನ ಬಗ್ಗೆ ಕೆಲವು ವಿಚಾರಗಳನ್ನು ನೆನಪು ಮಾಡಿಕೊಳ್ಳಲೇಬೇಕು. ಅವರು ನಾಲ್ಕು ಮದುವೆ ಬಾರಿ ಮದುವೆ ಆಗಿದ್ದಾರೆ. ತಮ್ಮ 70ನೇ ವಯಸ್ಸಿನಲ್ಲಿ ಬಹುಕಾಲದ ಗೆಳತಿ ಪರ್ವೀನ್‌ ದುಸಾಂಜ್‌ ಜೊತೆ ನಾಲ್ಕನೇ ಮದುವೆ ಆಗುವ ಮೂಲಕ ಎಲ್ಲರಿಗೂ ಅವರು ಶಾಕ್‌ ನೀಡಿದ್ದರು.

Comments are closed.