ಮುಂಬೈ: ನಟ ಕಿಚ್ಚ ಸುದೀಪ್ ದಾದಾ ಸಾಹೇಬ್ ಫಾಲ್ಕೆ ಭರವಸೆ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಕಿಚ್ಚ ಈ ಗೌರವ ಸ್ವೀಕರಿಸಿದರು.
ಕಳೆದ ವರ್ಷ ತೆರೆಗೆ ಬಂದಿದ್ದ ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್ 3’ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ನಟನೆಗಾಗಿ ಸುದೀಪ್ಗೆ ದಾದಾ ಸಾಹೇಬ್ ಫಾಲ್ಕೆ ಭರವಸೆ ನಟ ಪ್ರಶಸ್ತಿ ದೊರೆತಿದೆ.
ಈ ಬಗ್ಗೆ ಟ್ವೀಟ್ ಮಾಡಿ ಧನ್ಯವಾದ ಹೇಳಿರುವ ಸುದೀಪ್, “ಗೆಳೆಯರಿಗೆ, ಮಾಧ್ಯಮ ಮಿತ್ರರಿಗೆ, ಸಹೋದ್ಯೋಗಿಗಳಿಗೆ, ಸಹ ಕಲಾವಿದರಿಗೆ, ತಂತ್ರಜ್ಞರಿಗೆ, ನನ್ನ ಕುಟುಂಬ, ನನ್ನ ತಂಡಕ್ಕೆ ಧನ್ಯವಾದಗಳು. ಪರಿಪೂರ್ಣವಾಗಲು ನೀವು ಕಾರಣ. ಉತ್ತಮವಾಗಿ ನಟಿಸಲು ನೀವು ಕಾರಣ,” ಎಂದು ಸುದೀಪ್ ಧನ್ಯವಾದ ಹೇಳಿದ್ದಾರೆ.
‘ದಬಾಂಗ್ 3’ ಚಿತ್ರದಲ್ಲಿ ಸುದೀಪ್ ನೆಗೆಟಿವ್ ಪಾತ್ರ ಮಾಡಿದ್ದರು. ಸಲ್ಮಾನ್ ಖಾನ್ ನಟನೆಯ ಈ ಚಿತ್ರಕ್ಕೆ ಪ್ರಭುದೇವ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರದ ನಟನೆಗೆ ಸುದೀಪ್ಗೆ ಈ ಪ್ರಶಸ್ತಿ ಜನವರಿ ತಿಂಗಳಲ್ಲಿ ಘೋಷಣೆ ಆಗಿತ್ತು. ಫೆ.20ರಂದು ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸುದೀಪ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
Comments are closed.