ರಾಷ್ಟ್ರೀಯ

ನಿರ್ಭಯಾ ಅಪರಾಧಿ ವಿನಯ್ ಶರ್ಮಾ ನಿಂದ ಸ್ಟೇಪ್ಲರ್ ಪಿನ್ ನುಂಗಲು ಯತ್ನ

Pinterest LinkedIn Tumblr


ನವದೆಹಲಿ: ನೇಣಿಗೇರುವ ದಿನ ಸಮೀಪಿಸುತ್ತಿರುವಂತೆಯೇ ನಿರ್ಭಯಾ ಅತ್ಯಾಚಾರಿಗಳಲ್ಲಿ ಒಬ್ಬನಾದ ವಿನಯ್‌ ಶರ್ಮಾ ಮತ್ತೂಂದು ನಾಟಕ ಮಾಡಿದ್ದಾನೆ. ತಿಹಾರ್‌ ಜೈಲಿನಲ್ಲಿರುವ ತನ್ನ ಕೊಠಡಿಯಲ್ಲಿ ಸ್ಪೇಪಲ್‌ ಪಿನ್‌ ನುಂಗುವ ಮೂಲಕ ತನಗೆ ತಾನೇ ಹಾನಿಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ತಕ್ಷಣವೇ ಎಚ್ಚೆತ್ತುಕೊಂಡ ಜೈಲಿನ ಅಧಿಕಾರಿಗಳು, ಆತನನ್ನು ತಡೆದು, ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಗಲ್ಲುಶಿಕ್ಷೆಯ ದಿನಾಂಕ ಘೋಷಿಸಿದಾಗಿನಿಂದಲೂ ವಿನಯ್‌ ವಿಚಿತ್ರವಾಗಿ ಹಾಗೂ ಹಿಂಸಾತ್ಮಕವಾಗಿ ವರ್ತಿಸತೊಡಗಿದ್ದಾನೆ. ಆದರೂ, ಆತನ ದೈಹಿಕ ಹಾಗೂ ಮಾನಸಿಕ ಆರೋಗ್ಯ ದೃಢವಾಗಿಯೇ ಇದೆ. ದಿನದ 24 ಗಂಟೆಯೂ ಎಲ್ಲ ನಾಲ್ವರು ಅಪರಾಧಿಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಅವರಿರುವ ಕೊಠಡಿಯ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನೂ ವೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ವಿನಯ್‌ ತಲೆಯನ್ನು ಗೋಡೆಗೆ ಚಚ್ಚಿಕೊಂಡು ಗಾಯಮಾಡಿಕೊಳ್ಳಲು ಯತ್ನಿಸಿದ್ದ.

Comments are closed.