ಲಾಸ್ ಏಂಜಲೀಸ್: ಭೂಮಿ ದುಂಡಗಾಗಿಲ್ಲ, ಚಪ್ಪಟೆಯಾಗಿದೆ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇನೆ ಎಂದು ಪಣತೊಟ್ಟಿದ್ದ ಅಮೆರಿಕದ ಹವ್ಯಾಸಿ ಗಗನಯಾತ್ರಿ ಸ್ವನಿರ್ಮಿತ ರಾಕೆಟ್ ಪತನಗೊಂಡು ಸಾವನ್ನಪ್ಪಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ ಎಂದು ಸೈನ್ಸ್ ಚಾನೆಲ್ ವರದಿ ಮಾಡಿದೆ.
ಸ್ವನಿರ್ಮಿತ ರಾಕೆಟ್ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ನಡೆದ ದುರಂತರದಲ್ಲಿ “ಮೈಕೇಲ್ ಮ್ಯಾಡ್ ಮೈಕ್ ಹಗ್ಸ್ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಮೂಲತಃ ಸಾಹಸ ಕೃತ್ಯಗಳಲ್ಲಿ ತೊಡಗುವ ಹಗ್ಸ್ ಕ್ಯಾಲಿಫೋರ್ನಿಯಾದ ಬ್ರಸ್ಟೌ ನಲ್ಲಿ ಹಬೆಯಾಧಾರಿತ ರಾಕೆಟ್ ಅನ್ನು ಉಡ್ಡಯನ ಮಾಡಿದ್ದರು. ಈ ಯೋಜನೆಗಾಗಿ ಹಲವು ಕಂಪನಿಗಳು ಪೋಷಕರಾಗಿದ್ದವು ಎಂದು ವರದಿ ವಿವರಿಸಿದೆ.
ಸ್ಥಳೀಯ ಪತ್ರಿಕೆಗಳ ಜತೆ ಮಾತನಾಡಿದ್ದ ಹಗ್ಸ್, ಸುಮಾರು 1,500 ಮೀಟರ್ ಎತ್ತರದಿಂದ ವೀಕ್ಷಿಸುವ ಮೂಲಕ ಭೂಮಿ ದುಂಡಗಿಲ್ಲ. ಆದರೆ ಭೂಮಿ ಚಪ್ಪಟೆಯಾಕಾರದಲ್ಲಿದೆ ಎಂಬುದನ್ನು ಸಾಬೀತುಪಡಿಸುವುದಾಗಿ ಪಣತೊಟ್ಟಿರುವುದಾಗಿ ವರದಿ ಹೇಳಿದೆ.
ಭೂಮಿ ಚಪ್ಪಟೆಯಾಗಿದೆ ಎಂಬ ಹೇಳಿಕೆ ಬಹುತೇಕ ಸಾರ್ವಜನಿಕ ವಲಯದಲ್ಲಿ ಜನಪ್ರಿಯತೆ ಪಡೆದುಕೊಂಡಿತ್ತು ಎಂದು ಆತನ ವಕ್ತಾರ ಡಾರ್ರೆನ್ ಶಸ್ಟೆರ್ ಲಾಸ್ ಏಂಜಲೀಸ್ ಟೈಮ್ಸ್ ಗೆ ತಿಳಿಸಿದ್ದಾರೆ.
Comments are closed.