ರಾಷ್ಟ್ರೀಯ

ಗೋಹತ್ಯೆ: ಮಗಳನ್ನೇ ವಿವಾಹವಾಗುವಂತೆ ಪಂಚಾಯಿತಿಯಿಂದ ಶಿಕ್ಷೆ!

Pinterest LinkedIn Tumblr


ವಿಧಿಶಾ: ಆಕಸ್ಮಿಕವಾಗಿ ಹಸು ಹತ್ಯೆಗೆ ಕಾರಣನಾದ ವ್ಯಕ್ತಿಗೆ, ಆತನದ್ದೇ 13 ವರ್ಷದ ಮಗಳನ್ನೇ ವಿವಾಹವಾಗುವಂತೆ ಪಂಚಾಯಿತಿಯೊಂದು ಶಿಕ್ಷೆ ವಿಧಿಸಿದ ವಿಕೃತ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಧಿಶಾ ಜಿಲ್ಲೆಯ ಪತಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿ ಡಿಕ್ಕಿ ಹೊಡೆದ ಕಾರಣ ಹಸು ಮೃತಪಟ್ಟಿತ್ತು. ಅಪಘಾತ ಎಸಗಿತ ವ್ಯಕ್ತಿ, ಪ್ರಾಯಶ್ಚಿತ್ತವಾಗಿ ತನ್ನದೇ 13 ವರ್ಷದ ಮಗಳನ್ನು ವಿವಾಹವಾಗಬೇಕು ಎಂದು ಪಂಚಾಯಿತಿ ಆದೇಶಿಸಿತು. ಅದರಂತೆ ಆ ವ್ಯಕ್ತಿ ಕೂಡ ವಿವಾಹದ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಅಷ್ಟೊತ್ತಿಗೆ ಮಧ್ಯ ಪ್ರವೇಶಿಸಿದ ಪೊಲೀಸರು, ಬಾಲ್ಯ ವಿವಾಹ ಅಪರಾಧ ಎಂಬ ಕುರಿತು ವ್ಯಕ್ತಿಗೆ ತಿಳಿ ಹೇಳಿ ವಿವಾಹವನ್ನು ತಡೆದಿದ್ದಾರೆ.

Comments are closed.