ರಾಷ್ಟ್ರೀಯ

ಅಮ್ಮನ ಅಕ್ರಮ ಸಂಬಂಧದ ಕುರಿತು ಅಪ್ಪನಿಗೆ ಹೇಳಿದ 4ರ ಬಾಲಕ

Pinterest LinkedIn Tumblr


ಮಧುರೈ: ತನ್ನ ತಾಯಿಯ ಅಕ್ರಮ ಸಂಬಂಧದ ಕುರಿತು ತಂದೆಗೆ ಹೇಳಿದ ಅಪ್ರಾಪ್ತ ಬಾಲಕನನ್ನು ಕೊಲೆಗೈದ ಘಟನೆಯೊಂದು ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

ಬಾಲಕ ಲೋಕೇಶ್(4)ನನ್ನು ಸೂರಿಮುತ್ತು ಎಂಬ ತಾಯಿಯ ಪ್ರಿಯತಮ ಕೊಲೆಗೈದು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಸೂರಿಮುತ್ತುಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೂರಿಮುತ್ತು ಹಾಗೂ ಬಾಲಕನ ತಾಯಿ ದೀಪಾಳ ಮಧ್ಯೆ ಅಕ್ರಮ ಸಂಬಂಧವಿತ್ತು. ಈ ವಿಚಾರವನ್ನು ಬಾಲಕ ತನ್ನ ತಂದೆಯ ಬಳಿ ಹೇಳಿದ್ದೇ ಈ ಘಟನೆಗೆ ಕಾರಣವಾಗಿದೆ.

ಕೊಯಂಬತ್ತೂರಿನ ಪೊಲ್ಲಾಚಿ ನಿವಾಸಿಯಾಗಿರೋ ದೀಪಾಳಿಗೆ 2005ರಲ್ಲಿ ಆಂಟೋನಿ ಪ್ರಕಾಶ್ ಎಂಬಾತನ ಜೊತೆ ವಿವಾಹವಾಗಿತ್ತು. ಆ ಬಳಿಕ ದಂಪತಿ ಆಂಟೋನಿ ಗ್ರಾಮದಲ್ಲೇ ವಾಸವಾಗಿದ್ದು, ದಂಪತಿಗೆ ಗಂಡು ಮಗುವೂ ಜನಿಸಿತ್ತು.

ನಡೆದಿದ್ದೇನು?
ಒಂದು ದಿನ ದೀಪಾ ಹಾಗೂ ಸೂರಿಮುತ್ತು ಮಧ್ಯೆ ಸಂಬಂಧ ಬೆಳೆದಿದೆ. ಅಂತೆಯೇ ಪತಿ ಆಂಟೋನಿ ಕೆಲಸಕ್ಕೆಂದು ಹೊರಗಡೆ ಹೋದ ಬಳಿಕ ದೀಪಾ ಹಾಗೂ ಸೂರಿಮುತ್ತು ಖಾಸಗಿ ಲಾಡ್ಜ್ ಗೆ ತೆರಳಿದ್ದಾರೆ. ಈ ವೇಳೆ ದೀಪಾ ತನ್ನ ಮಗನನ್ನೂ ಕರೆದುಕೊಂಡು ಹೋಗಿದ್ದಾಳೆ.

ಇತ್ತ ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ಪತಿ ವಾಪಸ್ ಬಂದಾಗ ದೀಪಾ ಮನೆಯಲ್ಲಿ ಇಲ್ಲದ್ದನ್ನು ಮನಗಂಡು ವಾಟ್ಸಾಪ್‍ನಲ್ಲಿ ವಿಡಿಯೋ ಕಾಲ್ ಮಾಡಿದ್ದಾರೆ. ಯಾಕೆಂದರೆ ಪತ್ನಿ ಎಲ್ಲಿದ್ದಾಳೆ ಎಂಬ ಸಂಶಯವೂ ಕಾಡಿದ್ದು, ಅದಕ್ಕೆ ತಕ್ಕಂತೆ ಆಕೆ ಫೋನ್ ಕೂಡ ರಿಸೀವ್ ಮಾಡಿಲ್ಲ. ಇದರಿಂದ ಆಂಟೋನಿ ತನ್ನ ಪತ್ನಿಯ ಬಗ್ಗೆ ಮತ್ತಷ್ಟು ಸಂಶಯಗೊಂಡರು. ಪತಿಯ ಕರೆಯನ್ನು ಲೆಕ್ಕಿಸದೆ ದೀಪಾ ತನ್ನ ಮಗನನ್ನು ತಾವಿದ್ದ ರೂಮಿನಿಂದ ಹೊರಗಡೆ ಕಳುಹಿಸಿದ್ದಾಳೆ. ಅಲ್ಲದೆ ಇದೇ ವೇಳೆ ಸೂರಿಮುತ್ತು ಅಪ್ರಾಪ್ತ ಬಾಲಕನಿಗೆ ಥಳಿಸಿದ್ದಾನೆ ಎಂಬ ಆರೋಪವೂ ಕೇಳಿ ಬಂದಿದೆ.

ಕೆಲ ವರದಿಗಳ ಪ್ರಕಾರ, ಬಾಲಕ ಲೊಕೇಶ್ ತನ್ನ ತಾಯಿಯ ಮೊಬೈಲ್ ಹಿಡಿದುಕೊಂಡು ರೂಮಿನ ಹೊರಗಡೆ ನಿಂತುಕೊಂಡಿದ್ದನು. ಇದೇ ಸಂದರ್ಭದಲ್ಲಿ ಆಂಟೋನಿ ಮತ್ತೆ ಕಾಲ್ ಮಾಡಿದ್ದಾರೆ. ಈ ವೇಳೆ ಬಾಲಕ ಕರೆ ಸ್ವೀಕರಿಸಿ ಸೂರಿಮುತ್ತು ಬಗ್ಗೆ ತಿಳಿಸಿದ್ದಾನೆ. ಅಲ್ಲದೆ ತನಗೆ ಸೂರಿಮುತ್ತು ಹೊಡೆದಿರುವ ಬಗ್ಗೆಯೂ ವಿವರಿಸಿದ್ದಾನೆ. ಇತ್ತ ಬಾಲಕ ತನ್ನ ತಂದೆಯ ಬಳಿ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡ ಸೂರಿಮುತ್ತು, ಆತನಿಗೆ ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ತಿರುನೆಲ್ವೆಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಇತ್ತ ಆರೋಪಿ ಸೂರಿಮುತ್ತು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬಳಿಕ ಪೊಲೀಸರು ಬಾಲಕನ ತಾಯಿ ದೀಪಾಳನ್ನು ಬಂಧಿಸಿದ್ದಾರೆ. ಆದರೆ ಇದೂವರೆಗೂ ಎಫ್‍ಐಆರ್ ದಾಖಲಿಸಿಕೊಂಡಿಲ್ಲ.

Comments are closed.