ರಾಷ್ಟ್ರೀಯ

2000 ಹಾಗೂ 500ರ ನೋಟುಗಳ ಕುರಿತು SBI ಎಚ್ಚರಿಕೆ!

Pinterest LinkedIn Tumblr


ನವದೆಹಲಿ: 2016ರ ಅಪನಗದೀಕರಣದ ಬಳಿಕ ದೇಶಾದ್ಯಂತ ಕಪ್ಪು ಹಣದ ಹರಿವಿಗೆ ಕಡಿವಾಣ ಹಾಕಲು ಹಲವು ಹೆಜ್ಜೆಗಳನ್ನು ಇಡಲಾಗಿದೆ. ದೇಶಾದ್ಯಂತ ಎದುರಾದ ಹಣದ ಕೊರತೆಯನ್ನು ನೀಗಿಸಲು RBI ರೂ.2000 ಹಾಗೂ ರೂ.500ರ ನೂತನ ನೋಟುಗಳನ್ನು ಜಾರಿಗೊಳಿಸಿತ್ತು. ಆದರೆ, ಕಳೆದ ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ನಕಲಿ ನೋಟುಗಳ ಹರಿವು ಹೆಚ್ಚಾಗಿರುವ ಸುದ್ದಿಗಳು ಹೊರಬರುತ್ತಿವೆ. ಈ ಕುರಿತು ದೇಶದ ನಾಗರಿಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಮಾರುಕಟ್ಟೆಯಲ್ಲಿ ಈ ನೋಟುಗಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚಲನದಲ್ಲಿರುವ ಹಲವು ನೋಟುಗಳು ಕ್ಲೋನ್ ಗೆ ಒಳಗಾಗಿರುವ ಶಂಕೆ ವ್ಯಕ್ತಪಡಿಸಿದೆ.

SBI ನೀಡಿರುವ ಎಚ್ಚರಿಕೆ ಏನು?
ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿರುವ ಬ್ಯಾಂಕ್, ಅಸಲಿ ಹಾಗೂ ನಕಲಿ ನೋಟುಗಳ ನಡುವಿನ ಅಂತರ ತಿಳಿಯುವುದು ಅಗತ್ಯವಾಗಿದೆ. ನಿಮ್ಮ ಬಳಿ ಬಂದಿರುವ ನೋಟನ್ನು ಕೂಲಂಕುಷವಾಗಿ ಪರಿಶೀಲಿಸಿ ಅಸಲಿ ನೋಟಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಇದೆ ಟ್ವೀಟ್ ನಲ್ಲಿ SBI ಒಂದು ಫೋಟೋವೊಂದನ್ನು ಹಂಚಿಕೊಂಡು ಅಸಲಿ ಹಾಗೂ ನಕಲಿ ನೋಟುಗಳ ಅಂತರವನ್ನು ತಿಳಿಯ ಪಡಿಸಲುಯತ್ನಿಸಿದೆ. RBI ಕೂಡ ತನ್ನ ಅಧಕೃತ ವೆಬ್ ಸೈಟ್ ಮೂಲಕ ಈ ಎಲ್ಲದರ ಮಾಹಿತಿಯನ್ನು ಹಂಚಿಕೊಂಡಿದೆ.

ರೂ.2000 ನೋಟಿನ ಸೈಜ್ ಏನು?
2000 ರೂ. ನೋಟಿನ ಬೇಸ್ ಕಲರ್ ಮೆಜಿಂಟಾ ಆಗಿದ್ದು, ಇದರ ಸೈಜ್ 66x166MM ಇರುತ್ತದೆ. ನೋಟಿನ ಮುಂಭಾಗದಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರ ಹಾಗೂ ಹಿಂಭಾಗದಲ್ಲಿ ಮಂಗಳಯಾನದ ಚಿತ್ರವಿದೆ.

ರೂ.500 ನೋಟಿನ ಸೈಜ್ ಏನು?
ರೂ.500 ನೋಟಿನ ಬಣ್ಣ, ಥೀಮ್, ಡಿಸೈನ್ ಹಾಗೂ ಸಿಕ್ಯೋರಿಟಿ ವೈಶಿಷ್ಟ್ಯಗಳು ಹಳೆ ನೋಟಿನ ಹೋಲಿಕೆಯಲ್ಲಿ ತುಂಬಾ ಭಿನ್ನವಾಗಿದೆ. ಹೊಸ ನೋಟಿನ ಆಕಾರ 63x150MMಗಳಷ್ಟಿದೆ. ಇದರ ಬಣ್ಣ ಸ್ಟೋನ್ ಗ್ರೇ. ಇದರ ಥೀಮ್ ದೆಹಲಿಯ ಕೆಂಪು ಕೋಟೆಯನ್ನು ಆಧರಿಸಿದೆ. ಜೊತೆಗೆ ಸ್ವಚ್ಛ ಭಾರತ ಅಭಿಯಾನದ ಲೋಗೋ ಕೂಡ ಇದರಲ್ಲಿದೆ.

ಹೊಸ ರೂ.2000 ನೋಟಿನ ಅಸಲಿಯತ್ತು ಹೀಗೆ ಪತ್ತೆ ಮಾಡಿ
ಸಿಕ್ಯೋರಿಟಿ ಥ್ರೆಡ್ ಮೇಲೆ ಭಾರತ,RBI ಹಾಗೂ 2000 ನಮೂದಿಸಲಾಗಿದೆ. ಈ ನೋಟನ್ನು ಸ್ವಲ್ಪ ತಿರುಚಿದಾಗ ಈ ಥ್ರೆಡ್ ಬಣ್ಣ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗಲಿದೆ. ಚಿತ್ರದಲ್ಲಿಯೂ ಕೂಡ ನೀವು ನೋಟಿನ ಬಣ್ಣ ಬದಲಾಗುವುದನ್ನು ಗಮನಿಸಬಹುದು. ಬೆಳಕಿನಲ್ಲಿ ಈ ಅಂತರ ಸ್ಪಷ್ಟವಾಗಿ ಗೋಚರಿಸಲಿದೆ.

ಮಹಾತ್ಮಾ ಗಾಂಧಿ ಅವರ ವಾಟರ್ ಮಾರ್ಕ್ ಅಸಲಿ ನೋಟಿನ ಮೇಲೆ ಅಲ್ಪ ಬೆಳಕು ಚೆಲ್ಲುವ ಮೂಲಕ ಗಮನಿಸಬಹುದು. ಆದರೆ, ನಕಲಿ ನೋಟಿನಲ್ಲಿ ಈ ವಾಟರ್ ಮಾರ್ಕ್ ಮೂಡಿಸುವುದು ಅಸಂಭವ. ಹೀಗಾಗಿ ನಕಲಿ ನೋಟಿನಲ್ಲಿ ಈ ವಾಟರ್ ಮಾರ್ಕ್ ಇರುವುದಿಲ್ಲ.
ನೋಟಿನ ಕೆಳಭಾಗದಲ್ಲಿ ಒಂದು ಬಾಕ್ಸ್ ನಿರ್ಮಿಸಲಾಗಿದೆ. ಈ ಬಾಕ್ಸ್ ಅನ್ನು ಪ್ರತ್ಯೇಕವಾಗಿ ಡಾರ್ಕ್ ಇಡಲಾಗಿದೆ. ನೋಟಿನ ಮೇಲೆ ಇದನ್ನು ನೀವು ಸುಲಭವಾಗಿ ಗಮನಿಸಬಹುದು. ನೋಟನ್ನು ತಿರುಚಿ ಆ ನೋಟಿನ ಮೌಲ್ಯ ಇದರಲ್ಲಿ ನಮೂದಿಸಲಾಗಿರುವುದನ್ನು ನೀವು ಗಮನಿಸಬಹುದು. ನಕಲಿ ನೋಟಿನಲ್ಲಿ ಈ ಬಾಕ್ಸ್ ಅಸಲಿ ನೋಟಿನ ಹೋಲಿಕೆಯಲ್ಲಿ ಸ್ವಲ್ಪ ದೊಡ್ಡದಾಗಿವುದನ್ನು ನೀವು ನೋಡಬಹುದು.
ದೇವನಾಗರಿಯಲ್ಲಿ ನೋಟಿನ ಮೌಲ್ಯವನ್ನು ನೀವು ಸ್ಪಷ್ಟವಾಗಿ ನೋಡಬಹುದು.
ಗ್ಯಾರಂಟಿ ಕ್ಲಾಸ್, ಗವರ್ನರ್ ಹಸ್ತಾಕ್ಷರ, ಪ್ರಾಮಿಸ್ ಕ್ಲಾಜ್ ಹಾಗೂ RBI ಲೋಗೋ ನೋಟಿನ ಬಲಭಾಗದಲ್ಲಿರುವುದನ್ನು ನೀವು ಗಮನಿಸಬಹುದು.
ದೃಷ್ಟಿಹೀನರಿಗಾಗಿ ಮಹಾತ್ಮಾ ಗಾಂಧಿ ಭಾವಚಿತ್ರ, ಅಶೋಕ ಸ್ಥಂಬದ ಪ್ರತೀಕ, ಬ್ಲೇಡ್ ಲೈನ್ ಹಾಗೂ ಗುರುತು ಚಿನ್ಹೆಯನ್ನು ನೀವು ಸ್ಪರ್ಶಿಸಿ ಖಾತರಿಪಡಿಸಿಕೊಳ್ಳಬಹುದು. ಇದೆ ರೀತಿ ನೀವು ರೂ.500ರ ನೋಟನ್ನೂ ಕೂಡ ಚಿತ್ರದಲ್ಲಿ ತೋರಿಸಿರುವಂತೆ ಸ್ಪರ್ಶಿಸಿ ಖಾತರಿಪಡಿಸಿಕೊಳ್ಳಬಹುದು.

Comments are closed.