ಆರೋಗ್ಯ

ಶೇಕಡಾ 70 ರಷ್ಟು ಜನ ಎದುರಿಸುವ ಈ ಸಮಸ್ಯೆಗೆ ಮೂಲಕಾರಣ ತಿಳಿಯಿರಿ.

Pinterest LinkedIn Tumblr

ನೀವು ಇತ್ತೀಚಿನ ಸಮಯದಲ್ಲಿ ಹೆಚ್ಚಾಗಿ ಜನರಿಗೆ ಬೆನ್ನು ನೋವು ಹಾಗು ಮೂಳೆ ನೋವಿನ ಸಮಸ್ಯೆಗಳು ಕಡಿಮೆ ವಯಸ್ಸಿನಲ್ಲಿಯೇ ಕಾಣಿಸಿಕೊಂಡಿರುವುದನ್ನು ನೋಡಿರಬಹುದು. ಇದಕ್ಕೆಲ್ಲ ಪ್ರಮುಖ ಕಾರಣ ನಮ್ಮ ದೇಹಕ್ಕೆ ವಿಟಮಿನ್ ಡಿ ಯ ಕೊರತೆ. ಭಾರತದಲ್ಲಿ ಶೇಕಡಾ 70 ರಷ್ಟು ಜನ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಹಾಗಿದ್ದರೆ ಏನಿದು ಸಮಸ್ಯೆ ಯಾಕೆ ಈ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತೆ ಇಲ್ಲಿದೆ ಪರಿಹಾರ ಹಾಗೂ ಉಪಾಯಗಳು.

ಮೂಳೆ ಗಟ್ಟಿಯಾಗಲು ವಿಟಮಿನ್‌ ಡಿ ಅತ್ಯವಶ್ಯಕ. ಇದರ ಕೊರತೆಯಿಂದ ಮೂಳೆಯ ಶಕ್ತಿ ಕುಂದುತ್ತದೆ. ಮೂಳೆ ಮೃದುವಾಗುತ್ತದೆ. ಶೇ 75ರಷ್ಟು ಮೂಳೆಮುರಿದ ರೋಗಿಗಳಲ್ಲಿ ವಿಟಮಿನ್‌ ಡಿ ಕೊರತೆಯು ಕಾರಣ.

ಮಕ್ಕಳಲ್ಲಿ ರಿಕೆಟ್ಸ್‌ ಮತ್ತು ದೊಡ್ಡವರಲ್ಲಿ ಅಸ್ಟಿಯೋಮಲೇಸಿಯಾ ಎಂಬ ರೋಗಗಳು ಕಾಣಿಸಿಕೊಳ್ಳತ್ತವೆ. ಮೂಳೆ ನೋವು ಮತ್ತು ಮೂಳೆ ಸವೆತ ಹೆಚ್ಚಾಗುವುದು. ಸೂರ್ಯನ ಬಿಸಿಲು ಬೀಳದೆ ಇರುವುದು, ಸೂರ್ಯನಿಗೆ ಸಾಕಷ್ಟು ಮೈಯೊಡ್ಡದಿರುವುದು, ಮೈಯನ್ನು ಸೂರ್ಯನಿಗೆ ತೋರದೆ ಮುಚ್ಚಿಕೊಳ್ಳುವುದು, ಸನ್‌ಸ್ಕ್ರೀನ್‌ ಬಳಸುವುದು, ಮೈ ತುಂಬಾ ಮುಚ್ಚಿಕೊಂಡಿರುವುದರಿಂದ, ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದರಿಂದ ಸೂರ್ಯನ ಕಿರಣಗಳು ಮೈ ಮೇಲೆ ಬೀಳುವುದಿಲ್ಲ. ಕಪ್ಪ್ಪು ಚರ್ಮ ಹೊಂದಿದವರಲ್ಲಿ ಮೆಲಲಿನ್‌ ಎನ್ನುವ ಬಣ್ಣಕಾರಕ ವಸ್ತು ಹೆಚ್ಚಿದ್ದು ಅದು ಸೂರ್ಯನಿಂದ ಹೊರಹೊಮ್ಮುವ ಅಲ್ಟ್ರಾವಯೋಲೆಟ್‌ ಬಿ ಕಿರಣಗಳಿಂದ ಚರ್ಮವನ್ನು ರಕ್ಷಿಸುವುದು.

ಪರಿಸರ ಮಾಲಿನ್ಯ, ಮೋಡಕವಿದ ವಾತಾವರಣಗಳು ಸೂರ್ಯನಿಂದ ಬರುವ ಅಲ್ಟ್ರವಾಯೊಲೆಟ್‌ ಬಿ ಕಿರಣಗಳನ್ನು ನಮಗೆ ದೊರೆಯದಂತೆ ಮಾಡುತ್ತದೆ. ಒತ್ತಡಯುಕ್ತ ಜೀವನ ಶೈಲಿ, ವಿಟಮಿನ್‌ ಡಿ ಇಲ್ಲದ ಆಹಾರ ಸೇವನೆ ಕೂಡ ಕಾರಣ. ಅತಿಯಾದ ಕೆಲಸದ ಒತ್ತಡದ ನಡುವೆ ಜನರು ಸೂರ್ಯನನ್ನು ನೋಡುವುದೇ ಅತಿ ವಿರಳ. ಅಂತಹ ಪರಿಸ್ಥಿತಿಯಲ್ಲಿ, ವಿಟಮಿನ್ ‘ಡಿ’ ಕೊರತೆಯು ಜನರ ಮೇಲೆ ವೇಗವಾಗಿ ಆಕ್ರಮಣ ಮಾಡುತ್ತಿದೆ. ಇದರಿಂದಾಗಿ ಜನರು ಕಿರಿಕಿರಿ ಮತ್ತು ಆಯಾಸದ ಬಗ್ಗೆ ದೂರು ನೀಡುತ್ತಲೇ ಇರುತ್ತಾರೆ. ದೇಹದ ಹಲವು ಭಾಗಗಳಲ್ಲಿ ನೋವು(ಸಾಮಾನ್ಯವಾಗಿ ಮೈ-ಕೈ ನೋವು) ವಿಟಮಿನ್ ‘ಡಿ’ ಕೊರತೆಯ ಲಕ್ಷಣವಾಗಿದೆ. ನಿಮಗೂ ಆಗಾಗ್ಗೆ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ವಿಟಮಿನ್ ‘ಡಿ’ ಕೊರತೆ ಒಂದು ಕಾರಣವಾಗಿರಬಹುದು. ಅದೇ ರೀತಿಯಲ್ಲಿ ತಡವಾಗಿ ಗಾಯ ಗುಣಪಡಿಸುವುದು, ಮೈ-ಕೈ ನೋವು, ಆಯಾಸ ಇವುಗಳು ಕೂಡ ವಿಟಮಿನ್ ಡಿ ಕೊರತೆಯ ಲಕ್ಷಣ.

ನಿಮಗೆ ತಿಳಿದಿರಲಿ ಶೇಕಡಾ 80ರಷ್ಟು ವಿಟಮಿನ್‌ ಡಿ ನಮಗೆ ಸೂರ್ಯನಿಂದ ದೊರೆಯುತ್ತದೆ. ಆದ್ದರಿಂದ ಪ್ರತಿ ದಿನ ಸುಮಾರು 30 ನಿಮಿಷ ಬಿಸಿಲಿಗೆ ಮೈಯೊಡ್ಡಿ. ಕಪ್ಪು ಬಣ್ಣದವರು ಮಾತ್ರ ಸುಮಾರು 2 ಗಂಟೆಯವರೆಗೆ ಬಿಸಿಲಿಗೆ ಮೈಯೊಡ್ಡಬೇಕು. ಬದಲಾದ ಜೀವನ ಶೈಲಿ ಎಲ್ಲರಲ್ಲಿಯೂ ವಿಟಮಿನ್‌ ಡಿ ಕೊರತೆ ಎದ್ದು ಕಾಣುವಂತೆ ಮಾಡಿದೆ.

ಸೂರ್ಯನ ಬಿಸಿಲು ದೇಹದ ಮೇಲೆ ಬಿದ್ದರೆ ವಿಟಮಿನ್‌ ಡಿ ತಯಾರುಗುತ್ತದೆ. ನಮ್ಮ ದೇಶದಲ್ಲಿ ಎಲ್ಲಾ ಕಡೆ ಸೂರ್ಯನ ಬಿಸಿಲು ಬೀಳುವುದು.  ಆದರೂ ಸಹ ಭಾರತದಲ್ಲಿ ಆರೋಗ್ಯವಂತರ ದೇಹದಲ್ಲಿ ವಿಟಮಿನ್‌ ಡಿ ಕೊರತೆ ಇರುವುದು ಕಂಡು ಬಂದಿದೆ. ವಿಟಮಿನ್ ‘ಡಿ’ ಕೊರತೆ ಇರುವವರು ಅದನ್ನು ತೊಡೆದುಹಾಕಲು, ಬೆಳಿಗ್ಗೆ 6 ರಿಂದ 7 ರ ನಡುವೆ ಸೂರ್ಯನ ಬೆಳಕಿನಲ್ಲಿ ಕೊಂಚ ಸಮಯ ಹೊರಗೆ ಓಡಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

Comments are closed.