ಕರಾವಳಿ

ಬೈಂದೂರು: ಬಡಾಕೆರೆ ಲಕ್ಷ್ಮೀ ಜನಾರ್ಧನ ದೇವಳಕ್ಕೆ ಕನ್ನ-10 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಕಳವು

Pinterest LinkedIn Tumblr

ಬೈಂದೂರು: ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾವುಂದ ಸಮೀಪದ ಬಡಾಕೆರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಕಳವು ನಡೆದಿದ್ದು ಬುಧವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

(ಬೆಳ್ಳಿ ಆಭರಣ- ಸಂಗ್ರಹ ಚಿತ್ರ)

      

ತಡರಾತ್ರಿ ಕನ್ನ ಹಾಕಿದ ಕಳ್ಳರು ದೇವಸ್ಥಾನದೊಳಗಿನ ಕೆ.ಜಿಗಟ್ಟಲೇ ಬೆಳ್ಳಿ ಆಭರಣ ಹಾಗೂ ಸಿಸಿ ಟಿವಿ ಡಿ.ವಿ.ಆರ್ ಹಾಗೂ ಎಲ್.ಇ.ಡಿ ಟಿವಿಯನ್ನು ಕಳವುಗೈದಿದ್ದಾರೆ. ಕಳವಾದ ವಸ್ತುಗಳ ಒಟ್ಟು ಮೌಲ್ಯ ಅಂದಾಜು ಹತ್ತು ಲಕ್ಷಕ್ಕೂ ಅಧಿಕ ಎನ್ನಲಾಗಿದೆ. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಬೈಂದೂರು ಪಿಎಸ್ಐ ಸಂಗೀತಾ ಹಾಗೂ ಸಿಬ್ಬಂದಿಗಳು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.

ಫೆಬ್ರವರಿ 21 ರಂದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು ಸಮೀಪದ ಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಳವಾಗಿತ್ತು. ಮಾರನೇ ದಿ‌ನ ಆಲೂರು ಮಾರಿಗುಡಿ ಕಳವು ನಡೆದಿದ್ದು ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳಿಂದ ಜನರು ಕಂಗಾಲಾಗಿದ್ದಾರೆ.

Comments are closed.